APL, BPL ಹೊಸ ಅರ್ಜಿದಾರರಿಗೆ ಗುಡ್‌ ನ್ಯೂಸ್!‌

APL, BPL ಹೊಸ ಅರ್ಜಿದಾರರಿಗೆ ಗುಡ್‌ ನ್ಯೂಸ್!‌

ಬೆಂಗಳೂರು: 2.35 ಲಕ್ಷ ಹೊಸ ಅರ್ಜಿ ಇದ್ದಾವೆ, ಮಾರ್ಚ್ 31 ರೊಳಗೆ ಅರ್ಜಿ ವಿಲೇವಾರಿ ಮಾಡ್ತೇವೆ. ಏಪ್ರಿಲ್ 01 ರಿಂದ ಹೊಸ ಕಾರ್ಡ್​ಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿ, ಪ್ರತಿ ತಿಂಗಳು ಅರ್ಜಿಗಳ ವಿಲೇವಾರಿ ಮಾಡ್ತೀವಿ. ಆರೋಗ್ಯಕ್ಕಾಗಿ ಕಾರ್ಡ್ ಕೇಳಿದವರಿಗೆ ಒಂದು ವಾರದ ಒಳಗೆ ಹೊಸ ಕಾರ್ಡ್ ಕೊಡ್ತಿದ್ದೇವೆ ಎಂದು ಕೆಎಚ್​ ಮುನಿಯಪ್ಪ ತಿಳಿಸಿದ್ದಾರೆ.

ಇನ್ನು ಬಿಪಿಎಲ್ ಕಾರ್ಡ್ ಪಡೆಯಲು 4 ಚಕ್ರವಾಹನ ಹೊಂದಿರಬಾರದು ಎಂಬ ಮಾನದಂಡ ಇತ್ತು ಇದೀಗ ಈ ಮಾನದಂಡವನ್ನು ತೆಗೆದು ಹಾಕಲಾಗಿದೆ ಈಗಾಗಲೇ ಎಪಿಎಲ್ ಪರಿವರ್ತನೆಯಾಗಿರುವ ಇಂತಹ ಕಾಡುಗಳನ್ನು ಬಿಪಿಎಲ್ ಆಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯ ಕಲಾಪದಲ್ಲಿ ಪ್ರಶ್ನೋತ್ತರ ವೇಳೆ ಈ ಕುರಿತು ಮಾಹಿತಿ ನೀಡಿರುವ ಸಚಿವರು ಕಳೆದ ಸರ್ಕಾರದ ಅವಧಿಯಲ್ಲಿ ಹೊಸ ಪಡಿತರ ಚೀಟಿಗಾಗಿ 2,95 ಸಾವಿರ ಅರ್ಜಿಗಳು ಬಂದಿವೆ ಇದರಲ್ಲಿ ಈಗಾಗಲೇ 57,000 ಕಾಡುಗಳನ್ನು ವಿತರಿಸಲಾಗಿದೆ ಉಳಿದ ಅರ್ಜಿಗಳನ್ನು ಪರಿಶೀಲಿಸಿ ಮಾರ್ಚ್ 31ರ ಒಳಗೆ ಅರ್ಹರಿಗೆ ಪಡಿತರ ಚೀಟಿ ವಿತರಿಸಲಾಗುವುದು ಎಂದು ಹೇಳಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos