ಅಬಕಾರಿ ಇಲಾಖೆಗೆ ಬಿಗ್ ಶಾಕ್!

ಅಬಕಾರಿ ಇಲಾಖೆಗೆ ಬಿಗ್ ಶಾಕ್!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಮತ್ತೆ ಮಧ್ಯದ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸಲಾಗಿದೆ ನೇರ ರಾಜ್ಯಗಳ ಮಧ್ಯದ ಬೆಲೆಗಳಿಗೆ ಅನುಗುಣವಾಗಿ ಎಂಐ ಮತ್ತು ಬಿ ಎಸ್ ಲ್ಯಾಬ್ ಗಳನ್ನು ಪರಿಸ್ಕರಿಸಲಾಗುತ್ತದೆ. ಪದೆ ಪದೇ ಬಿಯರ್ ಬೆಲೆ ಏರಿಕೆ ಮಾಡ್ತಿರುವ ಸರ್ಕಾರಕ್ಕೆ ಮದ್ಯಪ್ರಿಯರು ಶಾಕ್ ಕೊಟ್ಟಿದ್ದಾರೆ. ಜನವರಿಯಲ್ಲಿ ಬಾರಿ ಮಾರಾಟವಾಗಿದ್ದ ಬಿಯರ್, ದರ ಏರಿಕೆಯಾಗ್ತಿದ್ದಂತೆ ಮಾರಾಟ ಕುಸಿತವಾಗಿದೆ.

ಕಳೆದ ಸಾಲಿಗಿಂತ 2525 ಕೋಟಿ ರೂ ಅಧಿಕ ರಾಜ್ಯೋತ್ಸವ ಸಂಗ್ರಹ ಗುರಿ ಒಂದಲಾಗಿದೆ 23-24 ರಲ್ಲಿ ಅಬಕಾರಿ ಇಲಾಖೆಯಿಂದ 36,000 ಕೋಟಿ ರು ರಾಜತ್ವ ಸಂಗ್ರಹ ಗುರಿ ಒಂದಾಗಿದ್ದು ಜನವರಿ ಅಂತ್ಯದವರೆಗೆ 28 1 8 1 ಕೋಟಿ ರೂ ರಾಜಸ್ವ ಸಂಗ್ರಹಿಸಲಾಗಿದೆ.

ಕಳೆದ 14 ದಿನದಲ್ಲಿ ಬಿಯರ್ ಮಾರಾಟದ ಲೆಕ್ಕಚಾರ ತಲೆಕೆಳಗಾಗಿದೆ. ಕಳೆದ ವರ್ಷ ಫೆಬ್ರವರಿ ಒಂದರಿಂದ 14ರ ವರೆಗೆ 14.35 ಲಕ್ಷ ಕೇಸ್ ಬಿಯರ್ ಸೇಲ್ ಆಗಿತ್ತು. ಆದರೆ ಈ ವರ್ಷ ಕೇವಲ 13.34 ಲಕ್ಷ ಕೇಸ್ ಬಿಯರ್ ಮಾರಾಟವಾಗಿದೆ. ದರ ಏರಿಕೆಯಿಂದ ಬರೊಬ್ಬರಿ 1 ಲಕ್ಷ ಕೇಸ್ ಮಾರಾಟ ಕುಸಿತವಾಗಿದೆ.

ಇನ್ನೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ‌ ಬಂದಾಗ ಬಿಯರ್‌ ಮೇಲೆ ಶೇ.20ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ನಂತರ ಬಿಯರ್‌ ಉತ್ಪಾದನಾ ಕಂಪನಿಗಳು ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಾಟಲ್‌ ಮೇಲೆ ಕನಿಷ್ಠ 10 ರೂ.ವರೆಗೆ ಏರಿಕೆ ಮಾಡಿದ್ವು. ಮೂರನೇ ಬಾರಿ ಅಂದರೆ ಫೆಬ್ರವರಿ 1 ರಿಂದ ಬಿಯರ್ ಮೇಲಿನ ಅಬಕಾರಿ ಸುಂಕವನ್ನು 10 ರಷ್ಟು ಏರಿಕೆ ಮಾಡಿತ್ತು. ಇದರಿಂದ ಆರೇಳು ತಿಂಗಳ ಅವಧಿಯಲ್ಲಿ ಬಿಯರ್‌ ಬೆಲೆ ಸುಮಾರು ವಿವಿಧ ಬಾಟೆಲ್ ಮೇಲೆ 30 ರಿಂದ 40 ರೂಪಾಯಿ ಹೆಚ್ಚಳವಾಗಿದೆ. ಈ ವರ್ಷ ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ ₹36 ಸಾವಿರ ಕೋಟಿ ಆದಾಯ ಸಂಗ್ರಹದ ಟಾರ್ಗೆಟ್ ನೀಡಿದೆ.

ಈಗಾಗಲೇ 10 ತಿಂಗಳಿಗೆ ಬರೊಬ್ಬರಿ ₹28,000 ಕೋಟಿ ಆದಾಯ ಸಂಗ್ರಹವಾಗಿದೆ. ಇನ್ನೂ ಎರಡು ತಿಂಗಳಿನಲ್ಲಿ ಟಾರ್ಗೆಟ್ ರೀಚ್ ಆಗಲು 8 ಸಾವಿರಕ್ಕೂ ಅಧಿಕ ಆದಾಯ ಸಂಗ್ರಹವಾಗಬೇಕು. ಆದರೆ ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಿಗೆ ಮಾಡಿದ್ದಕ್ಕೆ ಮದ್ಯಪ್ರಿಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಮತ್ತು ದರ ಏರಿಕೆ ನಂತರ ಬಿಯರ್ ಸೇವಿಸುವುದನ್ನೆ ನಿಲ್ಲಿಸಿದ್ದೀವಿ ಎಂದು ಮದ್ಯಪ್ರಿಯರೊಬ್ಬರು ತಿಳಿಸಿದರು. ಬಿಯರ್ ದರ ಏರಿಕೆ ಬೆನ್ನಲ್ಲೇ ಅಬಕಾರಿ ಇಲಾಖೆಗೆ ಶಾಕ್ ಕೊಟ್ಟ ಮದ್ಯಪ್ರಿಯರು, ವ್ಯಾಪಾರದಲ್ಲಿ ಭಾರೀ ಕುಸಿತ

ಫ್ರೆಶ್ ನ್ಯೂಸ್

Latest Posts

Featured Videos