ಬಾಂಗ್ಲಾ ಬೌಲರ್ ಬೆವರಿಳಿಸಿದ ‘ಹಿಟ್ ಮ್ಯಾನ್’

ಬಾಂಗ್ಲಾ ಬೌಲರ್ ಬೆವರಿಳಿಸಿದ ‘ಹಿಟ್ ಮ್ಯಾನ್’

ಬೆಂಗಳೂರು, ನ. 8 : ಬಾಂಗ್ಲಾ ಬೌಲರ್ಗಳ ಬೆಂಡೆತ್ತಿದ ರೋಹಿತ್ ಶರ್ಮಾ 43 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸಿಡಿಸಿ 85 ರನ್ ಚಚ್ಚಿದರು. ಭಾರತ ಕೇವಲ 15.4 ಓವರ್ನಲ್ಲೇ 2 ವಿಕೆಟ್ ಕಳೆದುಕೊಂಡು 154 ರನ್ ಬಾರಿಸುವ ಮೂಲಕ ಗೆಲುವಿನ ನಗೆಬೀರಿತು.
ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.

ರೋಹಿತ್ ಪಡೆ 1-1ರ ಸಮಬಲ ಸಾಧಿಸು ಮೂಲಕ ಟೀಂ ಇಂಡಿಯಾ ವಿಶ್ವದಾಖಲೆ ನಿರ್ಮಿಸಿದೆ. ಅಂತರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ಚೇಸಿಂಗ್ ವೇಳೆ ಭಾರತ ದಾಖಲಿಸಿದ 41ನೇ ಜಯ ಇದಾಗಿದೆ. ಮುನ್ನ ಚೇಸಿಂಗ್ನಲ್ಲಿ ಗರಿಷ್ಠ ಪಂದ್ಯ ಗೆದ್ದ ಸಾಲಿನಲ್ಲಿ 40 ಗೆಲುವಿನೊಂದಿಗೆ ಮೊದಲ ಸ್ಥಾನದಲ್ಲಿತ್ತು. ಭಾರತ ಟಿ-20 ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಈವರೆಗೆ 61 ಬಾರಿ ಚೇಸಿಂಗ್ ಮಾಡಿದೆ. ಇದರಲ್ಲಿ 41 ಪಂದ್ಯ ಗೆದ್ದಿದೆ. ಇತ್ತ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 69 ಬಾರಿ ಚೇಸಿಂಗ್ ಮಾಡಿದ್ದು, ಇದರಲ್ಲಿ 40 ಪಂದ್ಯ ಗೆದ್ದಿದೆ. ಮೂರನೇ ಸ್ಥಾನದಲ್ಲಿ ಪಾಕಿಸ್ತಾನ ತಂಡವಿದ್ದು 67 ಬಾರಿ ಚೇಸಿಂಗ್ ಮಾಡಿ 36 ಗೆಲುವು ತನ್ನದಾಗಿಸಿದೆ. ಬಾಂಗ್ಲಾ ನೀಡಿದ್ದ 154 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ಪರ ನಾಯಕ ರೋಹಿತ್ ಶರ್ಮಾ ಅಮೋಘ ಆಟ ಪ್ರದರ್ಶಿಸಿದರು. ಮೊದಲ ಓವರ್ನಿಂದಲೇ ಆರ್ಭಟಿಸಲು ಶುರು ಮಾಡಿದರು. ಇವರಿಗೆ ಶಿಖರ್ ಧವನ್ ಉತ್ತಮ ರೀತಿಯಲ್ಲಿ ಸಾಥ್ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos