ಅಯೋಡಿನ್ ಕೊರತೆಯ ಬಗ್ಗೆ ಅರಿವು

ಅಯೋಡಿನ್ ಕೊರತೆಯ ಬಗ್ಗೆ ಅರಿವು

ಕೆ.ಆರ್.ಪುರ, ಅ. 26: ಜನರಲ್ಲಿ ಕಾಡುತ್ತಿರುವ ಅಯೋಡಿನ್ ಕೊರತೆಯನ್ನು ನೀಗಿಸಲು ಆರೋಗ್ಯ ಇಲಾಖೆ ವತಿಯಿಂದ ಜಾತ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾದಿಕಾರಿ ವಿಂದ್ಯಾ ತಿಳಿಸಿದರು.

ಕೆ.ಆರ್.ಪುರ ವಾಪ್ತಿಯಲ್ಲಿ ಬರುವ ಹೂಡಿ ವಾರ್ಡ್ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ  ರಾಷ್ಟ್ರೀಯ ಆಯೋಡಿನ್ ಕೊರತೆ ನ್ಯೂನತೆಗಳ ನಿಯಂತ್ರಣ ಅರಿವು ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿ ಅಯೋಡಿನ್ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಮನೆಯ ಮಟ್ಟದಲ್ಲಿ ಅಯೋಡಿನ್‌ ಯುಕ್ತ ಉಪ್ಪಿನ ಬಳಕೆಯನ್ನು ಶೇ 100 ರಷ್ಟು ಖಚಿತಪಡಿಸುವ ಗುರಿಯನ್ನು ಇಲಾಖೆ ಹಾಕಿಕೊಂಡಿದೆ ಎಂದರು.

ಅಯೋಡಿನ್ ಕೊರತೆಯಿಂದ ಬುದ್ದಿ ಮಾಂದ್ಯತೆ, ಕುಬ್ಬತನ, ಕಿವುಡುತನ, ಮೂಕತನ ಹಾಗೂ ಗಳಗಂಡ ಸೇರಿ ದಂತೆ ವಿವಿಧ ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ರಾಜು, ಆರೋಗ್ಯ ನಿರೀಕ್ಷಕರಾದ  ಶ್ರೀಶೈಲ, ಕೇಶವ ಮೂರ್ತಿ, ಯಶೋದಮ್ಮ ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos