ಮಂಗಳೂರು : ಸಂಶೋಧನಾ ಹಡಗಿನಲ್ಲಿ ಬೆಂಕಿ ಅವಘಡ , 46 ಮಂದಿಯ ರಕ್ಷಣೆ

  • In Crime
  • March 16, 2019
  • 212 Views
ಮಂಗಳೂರು : ಸಂಶೋಧನಾ ಹಡಗಿನಲ್ಲಿ ಬೆಂಕಿ ಅವಘಡ , 46 ಮಂದಿಯ ರಕ್ಷಣೆ

ಮಂಗಳೂರು, ಮಾ.16, ನ್ಯೂಸ್ ಎಕ್ಸ್ ಪ್ರೆಸ್: ಮಂಗಳೂರು: ಇಲ್ಲಿನ ಸಂಶೋಧನಾ ಹಡಗಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕರಾವಳಿ ಭದ್ರತಾಪಡೆಗಳು ರಕ್ಷಣೆಗೆ ಧಾವಿಸಿ ಹಡಗಿನಲ್ಲಿದ್ದ 46 ಮಂದಿಯನ್ನು ರಕ್ಷಿಸಿದ್ದಾರೆ.

ಇಲ್ಲಿನ ಸಮುದ್ರ ತೀರದಿಂದ 30 ಸಮುದ್ರ ಮೈಲಿ ದೂರದಲ್ಲಿ ಶುಕ್ರವಾರ ರಾತ್ರಿ ಅಗ್ನಿ ಶಿಪ್ಪಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ ‘ಸಾಗರ ಸಂಪದ’ ಸಂಶೋಧನಾ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದರಲ್ಲಿದ್ದ 46 ಮಂದಿಯನ್ನು ಕರಾವಳಿ ಕಾವಲು ಪಡೆ ಪ್ರಾಣಾಪಾಯದಿಂದ ರಕ್ಷಿಸಿದೆ. 30 ಸಿಬ್ಬಂದಿ ಹಾಗೂ 16 ಭಾರತೀಯ ಸಂಶೋಧನಾ ವಿಜ್ಞಾನಿಗಳು ಅದರಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

ಹಡಗನ್ನು ಪ್ರವೇಶಿಸಿದ ರಕ್ಷಣಾ ತಂಡ, ಬೆಂಕಿ ನಂದಿಸಿ ಒಳಗಿದ್ದವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಹಡಗಿನ ಕ್ಯಾಬಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 8 ಕ್ಯಾಬಿನ್ ಗಳು ಹಾನಿಗೊಂಡಿವೆ ಎನ್ನಲಾಗಿದೆ. ಹಡಗಿನಲ್ಲಿದ್ದ ಎಲ್ಲರನ್ನೂ ಸುರಕ್ಷಿತವಾಗಿ ಮಂಗಳೂರು ಬಂದರಿಗೆ ಕರೆ ತರಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos