ಹುಬ್ಬಳ್ಳಿ, ಮಾ. 13, ನ್ಯೂಸ್ ಎಕ್ಸ್ ಪ್ರೆಸ್: ದೇಶಾದ್ಯಂತ ಲೋಕಸಭಾ ಚುನಾವಣೆ ಕಾವು ಜೋರಾಗುತ್ತಿದ್ದು, ರಾಷ್ಟ್ರೀಯ ಪಕ್ಷಗಳು ಮತದಾರರನ್ನು ಸೆಳೆಯಲು ಹಲವಾರು ರೀತಿಯ ಪ್ರಚಾರ ತಂತ್ರಗಳನ್ನು ಬಳಸುತ್ತಿವೆ.
ಇದರ ನಡುವೇ ನಗರದ ಪ್ರತಿಷ್ಟಿತ ಕಾಲೇಜೊಂದರ ವಿದ್ಯಾರ್ಥಿನಿಯೊಬ್ಬರು ಮೋದಿ ಪರ ವಿಶಿಷ್ಟವಾಗಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ನಗರದ ಐಬಿಎಂಆರ್ ಕಾಲೇಜಿನ ಎಂಬಿಎ 2ನೇ ವರ್ಷದ ವಿದ್ಯಾರ್ಥಿನಿ ಅನಿತಾ ಪ್ರಿಡಾ ಎಂಬುವವರು ತನ್ನ ಕೈಗೆ ಟ್ಯಾಟೂ ಹಾಕಿಸಿಕೊಂಡು ಮೋದಿ ಪರ ಪ್ರಚಾರ ಮಾಡುತ್ತಿದ್ದಾರೆ. ವೋಟ್ ಫಾರ್ ಮೋದಿ ಎಂದು ಹಾಕಿಸಿಕೊಂಡಿದ್ದು, ಈ ಹಚ್ಚೆ ಈಗ ಸಾಮಾಜಿಕ ಜಾಲತಾಣಲ್ಲಿ ಸಖತ್ ವೈರಲ್ ಆಗಿದೆ.
ಮೋದಿಗೆ ಮತದಾನ ಮಾಡಿ ಎಂಬ ಹಚ್ಚೆಗೆ ಮೋದಿ ಅಭಿಮಾನಿಗಳು ಫೀದಾ ಆಗಿದ್ದಲ್ಲದೆ, ಅನಿತಾ ಜೊತೆ ಸೆಲ್ಫಿ ತೆಗೆಸಿಕೊಂಡು ಅವರ ಜಾಲತಾಣದ ಅಕೌಂಟಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ವಿದ್ಯಾರ್ಥಿ ಹಾಕಿಸಿಕೊಂಡಿರುವ ಟ್ಯಾಟೂ ಫೋಟೋವನ್ನು ಕೂಡಾ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ವೋಟ್ ಫಾರ್ ಮೋದಿಗೆ ಪ್ರಚಾರ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಬಿಜೆಪಿ ಕಾರ್ಯಕರ್ತರು ಈಗ ಟ್ಯಾಟೂಗೆ ಮಾರು ಹೋಗುತ್ತಿದ್ದಾರೆ.