ನವದೆಹಲಿ, ಜೂ. 1 : ಸಬ್ಸಿಡಿ ರಹಿತ ಅಡುಗೆ ಅನಿಲದ (ಎಲ್ಪಿಜಿ) ಬೆಲೆ ಪ್ರತಿ ಸಿಲಿಂಡರ್ಗೆ 1ರಂತೆ ಹೆಚ್ಚಿಸಲಾಗಿದೆ. ಸ್ಥಳೀಯ ಮಾರಾಟ ತೆರಿಗೆ ಇಲ್ಲವೆ ಮೌಲ್ಯವರ್ಧಿತ ತೆರಿಗೆಯ (ವ್ಯಾಟ್) ಕಾರಣಕ್ಕೆ ವಿವಿಧ ರಾಜ್ಯಗಳಲ್ಲಿನ ಬೆಲೆ ಹೆಚ್ಚಳವು ಪ್ರತಿ ಸಿಲಿಂಡರ್ಗೆ ಗರಿಷ್ಠ 4ರಷ್ಟು ಇರಲಿದೆ. ಸತತ ಎರಡನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿಲ್ಲ. ವಿಮಾನ ಇಂಧನ ಬೆಲೆ: ವಿಮಾನ ಇಂಧನ ಬೆಲೆ (ಎಟಿಎಫ್) ತಿಂಗಳ ಅವಧಿ ಮೂರನೇ ಬಾರಿಗೆ ಹೆಚ್ಚಿಸಲಾಗಿದೆ. ಪ್ರತಿ ಕಿಲೊ ಲೀಟರ್ಗೆ 2,922.94ರಂತೆ (ಶೇ 7.48) ಹೆಚ್ಚಿಸಲಾಗಿದೆ.