ಕೋಲ್ಕತ್ತಾ, ಫೆ. 1 : ಪತ್ನಿಯ ಕೊಳೆತ ಶವದ ಜೊತೆಗೆ ಪತಿಯು ಮೂರು ದಿನ ಕಳೆದ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ವರದಿಯಾಗಿದೆ. ಶುಕ್ರವಾರ ಈ ಘಟನೆ ಬೆಳಕಿಗೆ ಬಂದಿದ್ದು, ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನಾಡಿಯಾ ಜಿಲ್ಲೆಯ ಚಕ್ಢ್ ನಲ್ಲಿ ಈ ಘಟನೆ ನಡೆದಿದೆ. ಭಾರತಿ ಚಂದ ಎಂಬ ಮಧ್ಯ ವಯಸ್ಕ ಮಹಿಳೆ ಸಾವನ್ನಪ್ಪಿದವರು.
ಆಕೆ ಲಿವರ್ ಸಂಬಂಧಿತ ಆರೊಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಪತ್ತೆಯಾದ ಶವ ಕೊಳೆತು ಹೋಗಿದ್ದು, ಮಹಿಳೆ ಮೃತಪಟ್ಟು ಹಲವು ದಿನಗಳೇ ಆಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.