ಬೆಂಗಳೂರು, ನ. 9 : ಅಪ್ಪಟ ಗ್ರಾಮೀಣ ಪ್ರತಿಭೆ, ಯುವ ಬರಹಗಾರ್ತಿ. ಕನ್ನಡ ಬಿಗ್ ಬಾಸ್ 7 ರ ಸ್ಪರ್ಧಿ ಚೈತ್ರಾ ಕೊಟೂರ್ ಅವರ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ‘ಸೂಜಿದಾರ’ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಅಭಿನಯಿಸಿದ್ದು, ಹಾಡನ್ನು ಸಹ ರಚಿಸಿದ್ದಾರೆ.
ಚೈತ್ರಾ ಕೋಟೂರು ತಂದೆ ನಾರಾಯಣಪ್ಪ ಸೇನೆಯಲ್ಲಿ ಹವಾಲ್ದಾರ ಆಗಿ ಸೇವೆ ಸಲ್ಲಿಸಿ ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ. ಹವ್ಯಾಸಕ್ಕೆಂದು ಚುಟುಕುಗಳನ್ನು ಬರೆಯುತ್ತಾರೆ.
ತಾಯಿ ಸರ್ಕಾರಿ ಶಾಲಾ ಶಿಕ್ಷಕಿ. ಸಹೋದರ ಪ್ರದೀಪ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ. ಕಥೆ, ಕವನ, ಹನಿಗವಿತೆ, ಸಿನಿಮಾಗಳಿಗೆ ಸಂಭಾಷಣೆ ಮತ್ತು ಹಾಡಿನ ರಚನೆ, ಅಭಿನಯ ಹೀಗೆ ಅನೇಕ ರೀತಿಯ ಕಲಾ ಕೌಶಲ್ಯತೆಯನ್ನು ಹೊಂದಿದ್ದಾರೆ ಚೈತ್ರಾ. ಅಷ್ಟೇ ಅಲ್ಲದೇ ಇವರು ನಿರ್ದೇಶಕಿಯಾಗಿ ಗುರುತಿಸಿಕೊಳ್ಳುವ ಹಂಬಲ ಹೊಂದಿದ್ದು, ‘ವಿರಾಟಪರ್ವ’ ಚಿತ್ರದಲ್ಲೂ ಅಭಿನಯಿಸಿದ್ದಾರೆ.