ಚೆನ್ನೈ, ನ. 5 : ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದ ಮಹಿಳೆಯೊಬ್ಬರು ಸೆಲ್ಫೀ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ಬಾವಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚೆನ್ನೈನ ಪಟ್ಟಾಭಿರಾಮದಲ್ಲಿ ನಡೆದಿದೆ.
ಪಟ್ಟಾಭಿರಾಮದ ಗಾಂಧಿನಗರದ ಸಾವನ್ನಪ್ಪಿರುವ ಮಹಿಳೆ. ಕೆಲ ದಿನಗಳ ಹಿಂದಷ್ಟೇ ನವಜೀವನ್ ನಗರ ನಿವಾಸಿಯಾಗಿರುವ ಡಿ. ಅಪ್ಪು (24) ಎಂಬ ಯುವಕನೊಂದಿಗೆ ಸ್ಟೆಫ್ಫಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜ.ತಿಂಗಳಿನಲ್ಲಿ ಇಬ್ಬರ ವಿವಾಹ ನಿಶ್ಚಯವಾಗಿತ್ತು.
ಮಧ್ಯಾಹ್ನ 3 ಗಂಟೆ ಇಬ್ಬರೂ ವಂಡಲೂರು-ಮಿಂಜುರ್ ಕೃಷಿ ಭೂಮಿಗೆ ತೆರಳಿದ್ದಾರೆ. ಸ್ಥಳದಲ್ಲಿದ್ದ ಬಾವಿ ಬಳಿ ನಿಂತು ಫೋಟೋ ತೆಗೆಯುವಂತೆ ಪ್ರಿಯಕರನಿಗೆ ಬಾವಿಯೊಳಗೆ ಮೇಲೆ ನಿಂತಿದ್ದ ಸ್ಟೆಫ್ಫಿ ಫೋಟೋಗಳನ್ನು ತೆಗೆಯಲು ತಿಳಿಸಿದ ಹಿನ್ನಲೆ ಕಾಲು ಜಾರಿ ಬಾವಿಯೊಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ,ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.