ಮುಂಬೈ, ಜು. 8 : ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ ಮತ್ತವರ ಗಂಡ ನಿಕ್ ಜೋನಾಸ್ ಇಟಲಿ ಪ್ರವಾಸದಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಅಲ್ಲಿಗೆ ಹೋಗಿರುವ ಈ ಜೋಡಿ ಅಮೂಲ್ಯ ಸಮಯವನ್ನು ಕಳೆಯುತ್ತಿದೆ. ಈ ಸಂದರ್ಭದಲ್ಲಿ ತೆಗೆದ ವೀಡಿಯೊ, ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪತ್ನಿಯ ಜತೆಗಿನ ವೀಡಿಯೊ ಒಂದನ್ನು ಹಂಚಿಕೊಂಡಿದ್ದರು. ಇದರಲ್ಲಿ ಪ್ರಿಯಾಂಕಾ, ನಿಕ್ ಸುಂದರವಾದ ಪ್ರಕೃತಿಯ ನಡುವೆ ಸ್ಲೋ ಡ್ಯಾನ್ಸ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ವಿರುದ್ಧ ದೂರು ದಾಖಲಿಸಿದ ಪಾಕಿಸ್ತಾನ ನಿಕ್ ತನ್ನ ಇನ್ಸ್ಟಾಗ್ರಾಮ್ನಲ್ಲಿ ಈ ವೀಡಿಯೊ ಹಂಚಿಕೊಂಡಿದ್ದು, ಅಭಿಮಾನಿಗಳನ್ನು ಸೆಳೆಯುತ್ತಿದೆ. ಇಟಲಿಯ ಟಸ್ಕನಿಯಲ್ಲಿ ಈ ವೀಡಿಯೊ ಚಿತ್ರೀಕರಿಸಿದ್ದೇವೆ. ಕೇವಲ ನಾವು ಮೂರೇ ಮೂರು ಮಂದಿ ಮಾತ್ರ ಇಲ್ಲಿದ್ದೇನೆ ಎಂದಿದ್ದಾರೆ ನಟ ಜೋನಾಥನ್ ಟುಕರ್.