ತರಾಟೆಗೆ ತೆಗೆದುಕೊಂಡ ಶಾಸಕ

  • In State
  • August 11, 2020
  • 219 Views
ತರಾಟೆಗೆ ತೆಗೆದುಕೊಂಡ ಶಾಸಕ

ರಾಯಚೂರು : ಕೃಷಿ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದಾಗಿ ರಸಗೋಬ್ಬರದ ಅಭಾವ ಉಂಟಾಗಿದೆ ಎಂದು ಶಾಸಕ ಡಿಎಸ್ ಹೂಲಗೇರಿ ಕೃಷಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಪಟ್ಟಣದ ತಾ. ಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರ್ತಕರು ಮಾರುಕಟ್ಟೆಯಲ್ಲಿ ರಸಗೋಬ್ಬರದ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಯಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಕೂಡಲೇ ಗೋದಾಮಗಳ ಸಂಗ್ರಹ ಪರಿಶೀಲನೆ ಮಾಡಿ ರಸಗೋಬ್ಬರ ಪರವಾನಿಗೆಯನ್ನು ರದ್ದುಗೋಳಿಸಿ ಅಂಗಡಿಯನ್ನು ಸೀಜ್ ಮಾಡುವಂತೆ ಸೂಚನೆ ನೀಡಿದರು.ಅಲ್ಲದೇ ತೂಕದಲ್ಲಿಯು ವ್ಯತ್ಯಾಸ ಕಂಡುಬಂದಿದೆ ಎಂದು ರೈತರು ಆರೋಪಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿಲು ತಿಳಿಸಿದರು.

ತಾಲೂಕಿನಲ್ಲಿ ಕೋವಿಡ್-19 ಶಂಕಿತರ 6500 ವ್ಯಕ್ತಿಗಳ ಸ್ಲ್ಯಾಬ್ ಮಾದರಿ ಪರೀಕ್ಷೆ ಮಾಡಲಾಗಿದೆ. 378 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ ಎಂದು ತಾಲೂಕು ಆರೋಗ್ಯ ಅಧಿಕಾರಿ ರುದ್ರಗೌಡ ಪಾಟೀಲ್ ತಿಳಿಸಿದರು. ಬಡವರ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕೆಂದು ಶಾಸಕರು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos