5 ಕೆಜಿ ತೂಕ ಕಳೆದುಕೊಂಡ ಚಿದಂಬರಂ

5 ಕೆಜಿ ತೂಕ ಕಳೆದುಕೊಂಡ ಚಿದಂಬರಂ

ನವದೆಹಲಿ, ಅ. 19 : ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಕಳೆದ ಎರಡು ತಿಂಗಳಿನಿಂದ ಜೈಲಿನಲ್ಲಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ 5 ಕೆ.ಜಿ. ತೂಕ ಕಳೆದುಕೊಂಡಿದ್ದಾರೆ.
ಜೈಲಿನ ಪ್ರಕರಣದಲ್ಲಿ ಜಾಮೀನು ನೀಡುವಂತೆ ಸುಪ್ರೀಂಕೋರ್ಟ್ ನಲ್ಲಿ ಚಿದಂಬರಂ ಪರ ವಕೀಲರು ಮನವಿ ಮಾಡಿದ್ದು, ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ. ಇನ್ನು ಚಳಿಗಾಲದಲ್ಲಿ ಅವರ ಆರೋಗ್ಯ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. 73.5 ಕೆಜಿ ಇದ್ದ ಚಿದಂಬರಂ 68.5 ಕೆಜಿಗೆ ಇಳಿದಿದ್ದಾರೆ, ಈಗಾಗಲೇ 43 ದಿನಗಳು ಜೈಲಿನಲ್ಲಿರುವ ಚಿದಂಬರಂ ಆರೋಗ್ಯ ದೃಷ್ಟಿಯಿಂದ ಜಾಮೀನು ನೀಡಬೇಕು ಎಂದು ಅವರ ಪರ ವಕೀಲ ಕಪಿಲ್ ಸಿಬಲ್ ಮನವಿ ಮಾಡಿದ್ದರು .

ಫ್ರೆಶ್ ನ್ಯೂಸ್

Latest Posts

Featured Videos