ಇಂಡಿಯಾ: ಯುವ ಆಟಗಾರ ಟೆಸ್ಟ್ ತಂಡಕ್ಕೆ ಪದಾರ್ಪಣೆ!

ಇಂಡಿಯಾ: ಯುವ ಆಟಗಾರ ಟೆಸ್ಟ್ ತಂಡಕ್ಕೆ ಪದಾರ್ಪಣೆ!

ಬೆಂಗಳೂರು: ಇಂಗ್ಲೆಂಡ್ ವಿರುದ್ಧದಮೊದಲ ಟೆಸ್ಟ್ ಪಂದ್ಯ ಜನವರಿ 25 ರಿಂದ ಹೈದರಾಬಾದ್‌ನಲ್ಲಿ ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ 16 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ. ಯುವ ಆಟಗಾರ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಮೂಲಕ ಟೀಮ್‌ ಇಂಡಿಯಾಗೆ ಹೊಸ ವಿಕೆಟ್‌ ಕೀಪರ್‌ ಎಂಟ್ರಿ ಆಗಿದೆ.

ದೇಶೀಯ ಟೂರ್ನಿಗಳಲ್ಲಿ ಜನಪ್ರಿಯರಾಗಿದ್ದ ಧ್ರುವ್ ಜುರೆಲ್ ಮೊದಲ ಬಾರಿಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳನ್ನು ಆಡಿದ ಭಾರತ ಎ ತಂಡದಲ್ಲಿ ಜುರೆಲ್ ಅದ್ಭುತ ಪ್ರದರ್ನ ನೀಡಿದ್ದರು. 69 ರನ್ ಗಳಿಸಿ ಮಿಂಚಿದ್ದರು. ಕಳೆದ ವರ್ಷ ವಿದರ್ಭ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ 22ರ ಹರೆಯದ ಜುರೆಲ್ ಇದುವರೆಗೆ 15 ಪಂದ್ಯಗಳಲ್ಲಿ 46ರ ಸರಾಸರಿಯಲ್ಲಿ 790 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳು ಸೇರಿವೆ.

 

ಫ್ರೆಶ್ ನ್ಯೂಸ್

Latest Posts

Featured Videos