ಶಿಕ್ಷಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ! ರಾಯಚೂರು

ಶಿಕ್ಷಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ! ರಾಯಚೂರು

ರಾಯಚೂರು: ರಾಯಚೂರು ಕೃಷಿ ವಿಶ್ವ ವಿದ್ಯಾಲಯದ ಪ್ರೇಕ್ಷಕಗೃಹದಲ್ಲಿ ರಾಯಚೂರು ಖಾಸಗಿ ಅನುದಾನ ರಹಿತ ಶಾಲಾ‌ ಆಡಳಿತ ಮಂಡಳಿಗಳ ಒಕ್ಕೂಟ (ರುಸ್ಮಾ) ಆಯೋಜಿಸಿದ್ದ. ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ಭಾಗವಹಿಸಿ. ಕಾರ್ಯಕ್ರಮವನ್ನು ಕಿಲ್ಲೇ ಬೃಹನ್ಮಠದ ಪೀಠಾಧಿಪತಿಗಳಾ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾ ಸ್ವಾಮಿಗಳ ಅಮೃತ ಹಸ್ತದೊಂದಿಗೆ ಕೈ ಜೋಡಿಸಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ರಾಯಚೂರು ತಾಲೂಕಿನ ವಿವಿಧ ಖಾಸಗಿ ಶಾಲೆಗಳಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಶಿಕ್ಷಕ-ಶಿಕ್ಷಕೀಯರಿಗೆ ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ರುಸ್ಮಾ ಗೌರವ ಅದ್ಯಕ್ಷರಾದ ಜಯಣ್ಣ, ಅಧ್ಯಕ್ಷರು ರಾಜಾ ಶ್ರೀನಿವಾಸ್, ಶ್ರೀಕಾಂತ ವಕೀಲ್, ವೆಂಕಟ ಕೃಷ್ಣ, ಒಕ್ಕೂಟದ ಪದಾಧಿಕಾರಿಗಳಾದ ಹೆಚ್ ವೆಂಕಟೇಶಯ, ಗಿರೀಶ ಆಚಾರ್ಯ, ರಾಮಾಂಜನೇಯಲು, ಶೇಖರ್,ಸುಧಾಕರ್ ಪ್ರಭು, ಅಬ್ದುಲ್ ಫಿರೋಜ್, ಕೃಷ್ಣಾ ರಡ್ಡಿ, ಜಗದೀಶ ಗುಪ್ತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos