ನನಗೆ ರಾಜಕೀಯ ಗೊತ್ತಿಲ್ಲ: ಶಿವಣ್ಣ

ನನಗೆ ರಾಜಕೀಯ ಗೊತ್ತಿಲ್ಲ: ಶಿವಣ್ಣ

ಶಿವಮೊಗ್ಗ: ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜಕುಮಾರ್ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಶಿವರಾಜ್​ಕುಮಾರ್ ಪತ್ನಿ ಗೀತಾ ಶಿವರಾಜ್​ಕುಮಾರ್ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರು ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಪತಿ ಶಿವರಾಜ್​ಕುಮಾರ್ ಕೂಡ ಸಾತ್ ನೀಡುತ್ತಿದ್ದಾರೆ. ಪತ್ನಿಯ ಜೊತೆ ಹೋಗಿ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದಾರೆ.

ಶಿವರಾಜ್​ಕುಮಾರ್ ಅವರು ಚುನಾವಣೆಗೆ ಏಕೆ ನಿಲ್ಲುವುದಿಲ್ಲ ಅನ್ನೋದು ಅನೇಕರ ಪ್ರಶ್ನೆ ಇದಕ್ಕೆ ಅವರು ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಪ್ರಚಾರ ಮಾಡುವಾಗ ಉತ್ತರಿಸಿದ್ದಾರೆ. ‘ನನಗೆ ರಾಜಕೀಯ ಗೊತ್ತಿಲ್ಲ. ನಾನು ಅಲ್ಲಿ-ಇಲ್ಲಿ ಸೇವೆ ಮಾಡ್ತೀನಿ. ಗೀತಾ ಅವರ ಬ್ಲಡ್​ನಲ್ಲಿ ರಾಜಕೀಯ ಬ್ಲಡ್ ಇದೆ’ಎಂದಿದ್ದಾರೆ ಶಿವಣ್ಣ. ಶಿವರಾಜ್​ಕುಮಾರ್ ಅವರನ್ನು ನೋಡಲು ಅನೇಕರು ನೆರೆದಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos