ಮುಂಬೈ, ಜ. 13 : ಮುಂಬರುವ ಕಿವೀಸ್ ಪ್ರವಾಸದ ಟ್ವಿಟಿ ಟ್ವೆಂಟಿ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದೆ. ಲಂಕಾ ವಿರುದ್ಧ ಸ್ಥಾನ ಪಡೆದಿದ್ದ ಯುವ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ನನ್ನು ಮತ್ತೆ ಹೊರಗಿರಿಸಲಾಗಿದೆ.
ವಿರಾಟ್ ಕೊಹ್ಲಿ ತಂಡದ ನಾಯಕತ್ವ ವಹಿಸಿದ್ದು, ರೋಹಿತ್ ಶರ್ಮಾ ಮತ್ತೆ ತಂಡ ಕೂಡಿಕೊಂಡಿದ್ದಾರೆ. ಐದು ಪಂದ್ಯಗಳ ಸರಣಿಯಾದ ಕಾರಣ ಒಟ್ಟು 16 ಆಟಗಾರರ ತಂಡ ಆಯ್ಕೆ ಮಾಡಲಾಗಿದೆ. ಮೊಹಮ್ಮದ್ ಶಮಿ ಮತ್ತೆ ತಂಡ ಕೂಡಿಕೊಂಡಿದ್ದು ಉಳಿದಂತೆ ಲಂಕಾ ವಿರುದ್ಧದ ತಂಡ ಉಳಿಸಲಾಗಿದೆ. ಜನವರಿ 24ರಿಂದ ಟಿ ಟ್ವೆಂಟಿ ಸರಣಿ ಆರಂಭವಾಗಲಿದೆ.
ತಂಡ:
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್, ಶಿವಂ ದುಬೆ, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್. ಮೊಹಮ್ಮದ್ ಶಮಿ ಮತ್ತೆ ತಂಡ ಕೂಡಿಕೊಂಡಿದ್ದು ಉಳಿದಂತೆ ಲಂಕಾ ವಿರುದ್ಧದ ತಂಡ ಉಳಿಸಲಾಗಿದೆ. ಜನವರಿ 24ರಿಂದ ಟಿ ಟ್ವೆಂಟಿ ಸರಣಿ ಆರಂಭವಾಗಲಿದೆ.