ರಾಷ್ಟ್ರೀಯ ಯುವ ದಿನಾಚರಣೆ

ರಾಷ್ಟ್ರೀಯ ಯುವ ದಿನಾಚರಣೆ

ಬೆಂಗಳೂರು: ಪ್ರತಿ ವರ್ಷ ಜನವರಿ 12ರಂದು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ. ಯುವಕರು ಮಾನಸಿಕ ಭೌತಿಕ ಮತ್ತು ದೈಹಿಕವಾಗಿ ಸದೃಢವಾಗಿರಲು ಪ್ರೇರೇಪಿಸಿದ ಸ್ವಾಮಿ ವಿವೇಕಾನಂದರವರಿಗೆ ಈ ದಿನವನ್ನು ಸಮರ್ಪಿಸಲಾಗುತ್ತಿದೆ. ಜಗತ್ತಿನ ಮೊದಲ ಬಾರಿಗೆ ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯನ್ನು ಪರಿಚಯಿಸಿದ್ದ ವೀರ ಸನ್ಯಾಸಿ ಹುಟ್ಟಿದ ದಿನವನ್ನೇ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.

ವಿವೇಕಾನಂದರು 1863ರ ಜನವರಿ 12 ರಂದು ಕೊಲ್ಕೊತ್ತಾದಲ್ಲಿ ಜನಿಸಿದರು. ಇವರ ಮೊದಲ ಹೆಸರು ನರೇಂದ್ರನಾಥ ದತ್ತಾ. ಇವರ ತಂದೆ ವಿಶ್ವನಾಥ ದತ್ತ, ಇವರ ತಾಯಿ ಭುವನೇಶ್ವರಿ ದೇವಿ. ವಿಶ್ವದ ಶ್ರೇಷ್ಠ ಸಾಧಕರ ಸಾಲಿನಲ್ಲಿ ನಿಲ್ಲುವ ಜಗತ್ತಿನ ಆಧ್ಯಾತ್ಮಿಕ ನಾಯಕ ಸ್ವಾಮಿ ವಿವೇಕಾನಂದರು. ಅಂತಹ ತೇಜಸ್ವಿ ಸಾಧಕ ಸಂತರ ನುಡಿ ಸದಾ ಪ್ರೇರಣಾದಾಯಿಕವಾಗಿರುತ್ತದೆ. ಸ್ವಾಮಿ ವಿವೇಕಾನಂದರು ಯುವಜನತೆಗೆ ನೀಡಿದ ಸಂದೇಶಗಳು.

ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ, ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ಕಡೆಗೆ ಕರೆದೊಯ್ಯುವುದೇ ಗುರು,  ನಿಮ್ಮ ಮೇಲೆ ನೀವು ನಂಬಿಕೆ ಇಡಿ ಆಗ ಜಗತ್ತು ನಿಮ್ಮ ಪಾದದಡಿಯಲ್ಲಿರುತ್ತದೆ,

ವಿವೇಕಾನಂದರಲ್ಲಿನ ಅಪ್ರತಿಮ ರಾಷ್ಟ್ರಭಕ್ತಿ, ಸಮಾಜದೆಡೆಗಿನ ಅನಂತ ಪ್ರೇಮ, ಯುವಕರ ಮೇಲಿನ ಅದಮ್ಯ ಭರವಸೆ, ಆಧ್ಯಾತ್ಮಿಕ ಉತ್ಕಟಕೆ ಮತ್ತು ಔನ್ನತ್ಯ, ಅಪಾರ ಧರ್ಮ ಶ್ರದ್ಧೆ, ಸ್ತ್ರೀ ಬಗೆಗಿನ ಗೌರವ, ನೈಜ ಶಿಕ್ಷಣದ ಪರಿಕಲ್ಪನೆ, ಅದಮ್ಯ ವ್ಯಕ್ತಿತ್ವ ಆಯಸ್ಕಾಂತದಂತೆ ಜಗತ್ತಿನ ಜನರನ್ನು ಸೆಳೆಯುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos