ಸದೃಢ ಸಮಾಜಕ್ಕೆ ಯುವಕರ ಕೊಡುಗೆ ಅನನ್ಯ

  • In State
  • December 30, 2020
  • 182 Views
ಸದೃಢ ಸಮಾಜಕ್ಕೆ ಯುವಕರ ಕೊಡುಗೆ ಅನನ್ಯ

ಹನೂರು: ಸಶಕ್ತಿಶಾಲಿ, ಸದೃಡ ಸಮಾಜವನ್ನಾಗಿ ಮಾಡುವಲ್ಲಿ ಯುವಕರ ಪಾತ್ರ ಮುಖ್ಯವಾಗಿದ್ದು ಈ ದಿಸೆಯಲ್ಲಿ ಮಾರ್ಟಳ್ಳಿ ಭಾಗದಲ್ಲಿನ ಹಲವು ಗ್ರಾಮಗಳು ಇನ್ನೂ ಸಹ ಮೂಲಭೂತಸೌಕರ್ಯಗಳಿಂದ ವಂಚಿತವಾಗಿದ್ದು ಎಷ್ಟೋ ಜನರು ಇಂದಿಗೂ ಕೂಲಿ ಅರಸಿ ದಿನಕೂಲಿಗೊಷ್ಕರ ಪಟ್ಟಣಗಳಿಗೆ ವಲಸೆಹೋಗುವುದು ಹೆಚ್ಚುತ್ತಾ ಇರುವುದನ್ನು ಮನಗಂಡ ಕಡಬೂರು ಯುವಪಡೆ ಬದುಕಿನಲ್ಲಿ ಏನಾದರೂ ಸುಧಾರಣೆ ಮಾಡಿಕೂಳ್ಳಲೆಬೇಕು ಎಂದು ನಿವೃತ್ತ ಸೈನಿಕ ಗಂಗಾಧರ್ ಕರೆನೀಡಿದರು
ತಾಲ್ಲೂಕಿನ ಮಾರ್ಟಳ್ಳಿಯ ಕಡಬೂರು ಗ್ರಾಮದಲ್ಲಿ ಸರ್ವಧರ್ಮದ ಸಮಾಜ ಸೇವಕರ ಸಂಘವನ್ನು ಉದ್ಘಾಟನಾ ಸಮಾರಂಭವನ್ನು ನಿವೃತ್ತ ಸೈನಿಕರಾದ ಎಸ್ ಗಂಗಾಧರ್ ಅವರ ಅದ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು.
ಸಮಾಜದಲ್ಲಿ ಹಲವು ಬದಲಾವಣೆಗಳನ್ನು ತರಲು ಯುವಕರು ಒಗ್ಗಟ್ಟಾಗಿ ಸಂಘವನ್ನು ಕಟ್ಟಿಕೂಂಡಿರುವುದು ನಿಜಕ್ಕೂ ಸ್ಲಾಘನೀಯ ಸಂಘದ ಪ್ರತಿಯೊಂದು ವಿಚಾರದಲ್ಲೂ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಹೇಳಿ ಕೆಲ ಅಭಯದ ಮಾತುಗಳನ್ನಾಡಿದರು
ಇದೇ ವೇಳೆ ಪತ್ರಕರ್ತ ಅಭಿಲಾಷ್‌ಗೌಡ ಮಾತನಾಡಿ ಎಷ್ಟೋ ಸಂಘಗಳು ಉದ್ಘಾಟನೆಯಾಗುವಾಗ ಯುವಕರಲ್ಲಿ ಇರುವ ಹುಮ್ಮಸ್ಸು ದಿನಕಳದಂತೆ ಅದು ಕ್ಷೀಣಿಸುತ್ತದೆ ಅದಕ್ಕೆ ಕಾರಣ ಸಂಘದ ಯುವಕರಲ್ಲಿ ಒಗ್ಗಟ್ಟಿನ ಕೊರೆತೆ ಆದ್ದರಿಂದ ಕಡಬೂರಿನಲ್ಲಿ ಉದ್ಘಾಟನೆ ಆಗಿರುವ ಸರ್ವಧರ್ಮದ ಸಮಾಜ ಸೇವಕರ ಸಂಘದ ಎಲ್ಲಾ ಸದಸ್ಯರು ಒಗ್ಗಟಿನಿಂದ ಸದಾ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ತಾಲ್ಲೂಕಿನಲ್ಲಿಯೇ ಉತ್ತಮ ಸಂಘವಾಗಿ ಬೆಳಯಲಿ ಎಂದು ಶುಭ ಹಾರೈಸಿದರು.

ಫ್ರೆಶ್ ನ್ಯೂಸ್

Latest Posts

Featured Videos