ಯುವಜನತೆಗೆ ಬೇಕು ರಚನಾತ್ಮಕ ಯೋಜನೆ-ಕೆ.ಆರ್. ರವಿಕಿರಣ್

ಯುವಜನತೆಗೆ ಬೇಕು ರಚನಾತ್ಮಕ ಯೋಜನೆ-ಕೆ.ಆರ್. ರವಿಕಿರಣ್

ದೊಡ್ಡಬಳ್ಳಾಪುರ, ಸೆ. 20: ಮನುಕುಲದ ಮೇಲ್ಮೈಗಾಗಿ ಯುವಜನತೆ ‘ಸನ್ನದ್ಧ’ ಸಂಘಟನೆಯ ವಾರ್ಷಿಕೋತ್ಸವ ಸಮಾರಂಭವು ಶ್ರೀದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಆರ್.ರವಿಕಿರಣ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ನಗರರದಲ್ಲಿನ ಕೆಲ ಯುವಕರು ಒಟ್ಟುಗೂಡಿ ಸಮಾಜದ ಪರವಾದ ನಿಲುವುಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಎನ್.ಶ್ರೀಭಾಸ್ಕರ್ ಮಾತನಾಡಿ, ‘ಸದಾಕಾಲ ಸಮಾಜದ ಯಾವುದೇ ನೆರವಿಗೆ ನಾವು ಸಿದ್ದ ಎಂಬ ಪರಿಕಲ್ಪನೆಯಲ್ಲಿ ನಿಯಮಿತ ಸಂಖ್ಯೆಯ ಸ್ನೇಹಿತರು ಜತೆಗೂಡಿ ರೂಪಿಸಿದ ಸಂಸ್ಥೆ ಇದು’ ಎಂದು ಹೇಳಿದರು.

ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಡಾ.ಎಂ.ಚಿಕ್ಕಣ್ಣ, ಸಾಂಸ್ಕೃತಿಕ ಸಂಚಾಲಕ ಸಿ.ಪಿ.ಪ್ರಕಾಶ್ ಮಾತನಾಡಿದರು.

ವಿಭಾಗ ಮುಖ್ಯಸ್ಥೆ ಪಿ.ಚೈತ್ರ, ಐಕ್ಯೂಎಸಿ ಸಂಯೋಜಕ ಆರ್.ಉಮೇಶ್, ಸನ್ನದ್ಧ ಸಂಸ್ಥೆಯ ಪದಾಧಿಕಾರಿಗಳಾದ ಸುದರ್ಶನ್, ಸಾಯಿ ರಾಹುಲ್, ಪವನ್, ಬಿನಿತ್ಕುಮಾರ್ ಸಿಂಗ್, ಸಿಂಧು, ತೇಜಸ್ವಿನಿ, ಸ್ವಪ್ನ, ರಮ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos