ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು

ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು

ಬೆಳಗಾವಿ, ಜು. 15 : ರಾಜ್ಯದ ಆಡಳಿತ ಭಾಷೆ ಕನ್ನಡ, ಆದ್ದರಿಂದ ಕನ್ನಡಕ್ಕೆ ಮೊದಲ ಆದ್ಯತೆ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶ ವಿರೋಧಿಸಿ ಎಮ್.ಇ.ಎಸ್ ಮತ್ತೆ ಉದ್ದಟತನ ಮೆರದಿದೆ

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಆಗಿರುವುದರಿಂದ ಎಲ್ಲ ಸರಕಾರಿ ಮತ್ತು ಖಾಸಗಿ ಕಛೇರಿಗಳಲ್ಲಿ ಕನ್ನಡ ಭಾಷೆಯಲ್ಲಿಯೇ ವ್ಯವಹಾರಗಳು ನಡೆಯಬೇಕು ಮತ್ತು ಬೆಳಗಾವಿ ಗಡಿಬಾಗ ಆಗಿರುವುದರಿಂದ ಕನ್ನಡಕ್ಕೆ ದಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ.

ಅದ್ದರಿಂದ ಎಲ್ಲ ಅಂಗಡಿ ಮುಗ್ಗಟ್ಟುಗಳ ನಾಮಪಲಕಗಳ ಮೇಲೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಮತ್ತು ಹಿಂಡಲಗಾ ಪಂಚಾಯತ್ ಅಧಾಕಾರಿ ಮರಾಠಿ ಭಾಷೆಯಲ್ಲಿ ಅರ್ಜಿಗಳನ್ನು ನೀಡಿ ಕಾನೂನು ಉಲ್ಲಂಘನೆ ಮಾಡಿದ್ದಕ್ಕೆ ಅವರನ್ನು ಅಮಾನತ್ತುಗೊಳಿಸಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿಗಳು ನೀಡಿದ ಆದೇಶವನ್ನು ವಿರೋಧಿಸಿ ಎಂ.ಈ.ಎಸ್ ಮತ್ತೆ ಉದ್ದಟತನಕ್ಕೆ  ಸಾಕ್ಷಿಯಾಗಿದೆ.

ಇಂದು ಜಿಲ್ಲಾಧಿಕಾರಿಗ ಕಛೇರಿಗೆ ಆಗಮಿಸಿದ ಎಂ.ಈ.ಎಸ್ ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ಘೋಷಣೆ ಕೂಗಿ ಹಿಂಡಲಗಾದಲ್ಲಿ ಮರಾಠಿಗರ ಸಂಖ್ಯೆ ಹೆಚ್ಚಾಗಿದ್ದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮರಾಠಿ ಭಾಷೆಯಲ್ಲಿ ಆಡಳಿತ ನಡೆಸಿದ್ದಕ್ಕೆ ಅವರನ್ನು ಅಮಾನತ್ತು ಗೊಳಿಸಿದ್ದಾರೆ ಅದನ್ನು ಹಿಂಪಡೆಯಬೇಕು ಮತ್ತು ಖಾನಾಪೂರ, ನಿಪ್ಪಾಣಿ ಹಾಗು ಅಥಣಿಗಳಲ್ಲಿ ಮರಾಠಿಗರ ಸಂಖ್ಯೆ ಹೆಚ್ಚಾಗಿದ್ದು ಅಂಗಡಿ ಮುಗ್ಗಟ್ಟುಗಳ ಮೇಲೆ ಕನ್ನಡದಲ್ಲಿ ನಾಮಪಲಕ ಹಾಕಿ ವ್ಯಾಪಾರದಲ್ಲಿ ಹಾಣಿಯಾದರೆ ಅದರ ಹೊಣೆಯನ್ನು ರಾಜ್ಯಸರಕಾರ ಹೊರಬೇಕೆಂದು ಪುಂಡಾಟಿಕೆಯ ಮಾತುಗಳನ್ನಾಡಿತು

ಬೆಳಗಾವಿಯಲ್ಲಿ ಹಲವು ವರ್ಷಗಳಿಂದ ಗಡಿ ಸಮಸ್ಯೆ ನೆನೆಗುದಿಗೆ ಬಿದ್ದಿದ್ದು ಎಂ.ಈ.ಎಸ್ ಕನ್ನಡಿಗರ ಕಾಲೆಳೆಯುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಇದೀಗ ಆಡಳಿತ ಭಾಷೆಯಲ್ಲಿಯೂ ಮೂಗು ತುರಿಸುವ ಕೆಲಸ ಮಾಡುತ್ತಿದ್ದು, ಗಲಭೆಗಳಿಗೆ ಪ್ರಚೋದನೆ ನೀಡುವಂತೆ ವರ್ತಿಸುತ್ತಿದೆ ಈ ಕುರಿತು ಜಿಲ್ಲಾಧಿಕಾರಿಗಳು ಯಾವ ರೀತಿಯ ಕ್ರಮಗಳನ್ನು ತೆಗೆದೂಕೊಳ್ಳುತ್ತಾರೆ ಕಾದು ನೋಡಬೇಕಿದೆ.

ಫ್ರೆಶ್ ನ್ಯೂಸ್

Latest Posts

Featured Videos