ಯುವಕ ಬಲಿ

ಯುವಕ ಬಲಿ

ಚಾಮರಾಜನಗರ ,ನ. 21 : ಜೂಜಾಟದ ಸಾಲದ ಬಾಧೆಗೆ ಬೇಸತ್ತು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ಪಟ್ಟಣದ ನಿವಾಸಿ ಮಹಮ್ಮದ್ ಇದ್ದೀಸ್(30) ಎಂಬಾತ ಮೃತ ದುರ್ದೈವಿ. ಜೂಜಿಗಾಗಿ ಮಾಡಿದ್ದ ಸಾಲಗಾರರ ಕಾಟ ತಾಳಲಾರದೆ ಮೈಸೂರು-ಊಟಿ ಹೆದ್ದಾರಿ ಬಳಿಯ ಸೆಂಟ್ ಜಾನ್ ಕಾನ್ವೆಂಟ್ ಸಮೀಪದ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.

 

 

ಫ್ರೆಶ್ ನ್ಯೂಸ್

Latest Posts

Featured Videos