ವರ್ಕೌಟ್ ಫೋಟೊ ಹಂಚಿಕೊಂಡ ನಟಿ ಮೇಘಾ ಶೆಟ್ಟಿ

ವರ್ಕೌಟ್ ಫೋಟೊ ಹಂಚಿಕೊಂಡ ನಟಿ ಮೇಘಾ ಶೆಟ್ಟಿ

ಬೆಂಗಳೂರು: ಜೊತೆ ಜೊತೆಯಲ್ಲಿ ಧಾರಾವಾಹಿ ಮೂಲಕ ನಟನೆ ಆರಂಭಿಸಿದ ಮೇಘಾ ಶೆಟ್ಟಿ ಸದ್ಯ ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟಿಯಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದರು.

ಕಿರುತೆರೆ ನಟಿ ಮೇಘಾ ಶೆಟ್ಟಿ ಈಗ ಸ್ಯಾಂಡಲ್‌ವುಡ್‌ನಲ್ಲಿ ಕೂಡ ಗುರ್ತಿಸಿಕೊಂಡಿದ್ದಾರೆ. ಮೇಘಾ ತನ್ನ ನಟನೆಯಿಂದಲೇ ಅಲ್ಲ ಸೌಂದರ್ಯದಿಂದಲೂ ಅಭಿಮಾನಿಗಳ ಮನಗೆಲ್ಲುತ್ತಾರೆ. ಅಲ್ಲದೇ ಮೇಘಾ ಜಿಮ್‌ನಲ್ಲಿ ಪ್ರತಿದಿನ ಕಸರತ್ತು ಮಾಡುತ್ತಾರೆ. ಇನ್ನು ಆಗಾಗ್ಗೆ ಜಿಮ್‌ನಲ್ಲಿ ಫೋಟೊ ಕ್ಲಿಕ್ಕಿಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾರೆ.

ಸದ್ಯ ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಶಾರ್ಟ್ಸ್‌ ತೊಟ್ಟು ಜಿಮ್‌ನಲ್ಲಿ ವರ್ಕೌಟ್ ಮಾಡಿದ್ದಾರೆ. ಬಿಡುವಿನ ವೇಳೆ ಫೋನ್ ತೆಗೆದು ಒಂದಷ್ಟು ಮಿರರ್ ಸೆಲ್ಫಿ ಫೋಟೊಗಳನ್ನು ಕ್ಲಿಕ್ಕಿಸಿದ್ದಾರೆ.

ಅಭಿಮಾನಿಗಳು ತುಂಡು ಬಟ್ಟೆಯಲ್ಲಿ ಮೇಘಾ ಶೆಟ್ಟಿ ಅವತಾರ ಕಂಡು ಹುಬ್ಬೇರಿಸಿದ್ದಾರೆ. ಆಕೆ ವಿವಿಧ ಭಂಗಿಗಳಲ್ಲಿ ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos