RCB, DC ಯಾರೇ ಗೆದ್ದರು ಇತಿಹಾಸ ನಿರ್ಮಾಣ!

RCB, DC ಯಾರೇ ಗೆದ್ದರು ಇತಿಹಾಸ ನಿರ್ಮಾಣ!

ಬೆಂಗಳೂರು: ಡಬ್ಲ್ಯುಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ತಂಡವನ್ನು ಐದು ರನ್ ಗಳಿಂದ ಮಣಿಸಿ RCB ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ.

ದೆಹಲಿಯಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 5 ರನ್​ಗಳಿಂದ ಮಣಿಸಿದ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೇ ಮೊದಲ ಬಾರಿಗೆ ಮಹಿಳೆಯರ ಪ್ರೀಮಿಯರ್ ಲೀಗ್ ಫೈನಲ್​ ತಲುಪಿದೆ.

ವುಮೆನ್ಸ್ ಪ್ರೀಮಿಯರ್ ಲೀಗ್​ನ ಫೈನಲ್ ಫೈಟ್​ಗೆ ವೇದಿಕೆ ಸಿದ್ಧವಾಗಿದೆ. ನಾಳೆ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ವಿಶೇಷ ಎಂದರೆ ಈ ಪಂದ್ಯದ ಫಲಿತಾಂಶದೊಂದಿಗೆ ಒಂದು ತಂಡ ಪ್ರಶಸ್ತಿ ಖಾತೆ ತೆರೆಯಲಿದೆ.

ಅಂದರೆ ಉಭಯ ಫ್ರಾಂಚೈಸಿಗಳು ಕಳೆದ 16 ವರ್ಷಗಳಿಂದ ಭಾರತೀಯ ಅಂಗಳದಲ್ಲಿ ಟೂರ್ನಿ ಆಡುತ್ತಿದ್ದರೂ ಒಮ್ಮೆಯೂ ಟ್ರೋಫಿಯನ್ನು ಎತ್ತಿ ಹಿಡಿದಿಲ್ಲ. ಆರ್​ಸಿಬಿ ತಂಡವು ಒಟ್ಟು ನಾಲ್ಕು ಬಾರಿ ಫೈನಲ್​ಗೆ ಪ್ರವೇಶಿಸಿ ಅಂತಿಮ ಪಂದ್ಯದಲ್ಲಿ ಎಡವಿದರೆ, ಡೆಲ್ಲಿ ಕ್ಯಾಪಿಟಲ್ಸ್ 2 ಬಾರಿ ಪ್ರಶಸ್ತಿ ಹಣಾಹಣಿಯಲ್ಲಿ ಮುಗ್ಗರಿಸಿದೆ.

ಆರ್​ಸಿಬಿ ತಂಡವು 2011 ರ ಚಾಂಪಿಯನ್ಸ್​ ಟ್ರೋಫಿ ಫೈನಲ್​ನಲ್ಲೂ ಮುಗ್ಗರಿಸಿತ್ತು. ಇದೀಗ ಚೊಚ್ಚಲ ಟ್ರೋಫಿಯ ಕನಸಿನೊಂದಿಗೆ ಆರ್​ಸಿಬಿ ಮಹಿಳಾ ತಂಡ ಫೈನಲ್​ಗೆ ಪ್ರವೇಶಿಸಿದೆ.

ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 2020 ರಲ್ಲಿ ಮೊದಲ ಬಾರಿ ಐಪಿಎಲ್​ ಫೈನಲ್ ಆಡಿತ್ತು. ಆದರೆ ನಿರ್ಣಾಯಕ ಪಂದ್ಯದಲ್ಲಿ ಸೋಲುವ ಮೂಲಕ ಪ್ರಶಸ್ತಿ ಕೈಚೆಲ್ಲಿಕೊಂಡಿತು. ಇನ್ನು 2023ರ ವುಮೆನ್ಸ್ ಪ್ರೀಮಿಯರ್ ಲೀಗ್​ ಫೈನಲ್ ಆಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನುಭವಿಸಿತ್ತು.

ಇದೀಗ ಪ್ರಶಸ್ತಿ ಮರೀಚಿಕೆಯಾಗಿರುವ ಎರಡು ತಂಡಗಳು ಫೈನಲ್ ಆಡುತ್ತಿದೆ. ಇಲ್ಲಿ ಗೆಲ್ಲುವ ಒಂದು ಫ್ರಾಂಚೈಸಿಯು ಪ್ರಶಸ್ತಿ ಖಾತೆಯನ್ನು ತೆರೆಯಲಿದೆ. ಅದರಂತೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲಲಿದೆಯಾ ಅಥವಾ ಡೆಲ್ಲಿ ಕ್ಯಾಪಿಟಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆಯಾ? ಕಾದು ನೋಡಬೇಕಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos