ಕಷ್ಟಪಟ್ಟು ದುಡಿದು ತಾಯಿಗೆ ಕಾರ್ ಕೊಡಿಸಿದ 13ರ ಬಾಲಕ!

ಕಷ್ಟಪಟ್ಟು ದುಡಿದು ತಾಯಿಗೆ ಕಾರ್ ಕೊಡಿಸಿದ 13ರ ಬಾಲಕ!

ಏ. 4, ನ್ಯೂಸ್ ಎಕ್ಸ್ ಪ್ರೆಸ್: ಈಗಿನ ಹುಡುಗರು ಪಬ್‌ ಜಿ, ಟಿಕ್‌ ಟಾಕ್ ಅಂತ ತಮ್ಮ ಸಮಯವನ್ನು ಹಾಳು ಮಾಡುತ್ತಿದ್ದರೆ ಇಲ್ಲೊಬ್ಬ ಬಾಲಕ ತಾನು ಅರೆಕಾಲಿಕ ಕೆಲಸ ಮಾಡಿ ದುಡಿದ ಹಣದಲ್ಲಿ ತನ್ನ ತಾಯಿಗೆ ಕಾರ್ ಕೊಡಿಸಿದ್ದಾನೆ. ಅಮೆರಿಕದ ವಿಲಿಯಮ್ ರೆಬಿಲೊ ಎನ್ನುವ ಬಾಲಕ ಕಷ್ಟದಲ್ಲಿರುವ ತನ್ನ ತಾಯಿ ಕ್ರಿಸ್ಟಲ್ ಪ್ರೆಸಟನ್‌ ಗೆ ಸಹಾಯ ಮಾಡುವ ಸಲುವಾಗಿ ತನ್ನ ಶಾಲಾ ಅವಧಿ ಮುಗಿದ ನಂತರ ಬೇರೆಯವರ ಮನೆ ಮುಂದಿನ ಹುಲ್ಲುಹಾಸನ್ನು ಕಟ್ ಮಾಡಿ ದುಡ್ಡು ಗಳಿಸಿದ್ದಾನೆ. ಅಷ್ಟೇ ಅಲ್ಲದೇ ಅವನ ಹತ್ತಿರ ಇದ್ದ ಎಕ್ಸ್ ಬಾಕ್ಸ್ ವಿಡಿಯೋ ಗೇಮ್ ಕೂಡ ಮಾರಿದ್ದಾನೆ. ಬಂದ ದುಡ್ಡನ್ನು ಕೂಡಿಹಾಕಿ ಸೆಕೆಂಡ್ ಹ್ಯಾಂಡ್ ಕಾರ್ ಒಂದನ್ನು ಖರೀದಿಸಿ ತನ್ನ ತಾಯಿಗೆ ಉಡುಗೊರೆಯಾಗಿ ನೀಡಿದ್ದಾನೆ. ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ತಾಯಿ, ಇಂತಹ ಮಗನನ್ನು ಪಡೆದಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos