ಕಟ್ಟಡ ಕುಸಿದು ಬೀದಿಗೆ ಬಿದ್ದ ಕುಟುಂಬಗಳ ರೋಧನೆ ಕೇಳೊರ್ಯಾರು?

ಕಟ್ಟಡ ಕುಸಿದು ಬೀದಿಗೆ ಬಿದ್ದ ಕುಟುಂಬಗಳ ರೋಧನೆ ಕೇಳೊರ್ಯಾರು?

ಜೆಪಿನಗರ, ಸೆ. 9: ಏಳನೆ ಹಂತದ ಪುಟ್ಟೇನಹಳ್ಳಿ ವಿವೇಕನಂದ ಕಾಲೋನಿಯಲ್ಲಿ ಕುಸಿದು ಬಿದ್ದ ಮೂರು ಹಂತಸ್ತಿನ ಜನವಸತಿ ಕಟ್ಟಡದ ನಿವಾಸಿಗಳು ಮನೆಯಲ್ಲಿದ್ದ ವಸ್ತುಗಳನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದಾರೆ.

ಕಟ್ಟಡ ಕುಸಿಯುವ ಮುನ್ಸೂಚನೆ ಇದ್ದರೂ ಬೇರೆ ಕಡೆ ಮನೆ ಸಿಗದೆ ಹಾಗೂ ಮಾಲೀಕರು ಮುಂಗಡ ಹಣ ವಾಪಸ್ ನೀಡದ ಕಾರಣ ಶಿಥಿಲಾವಸ್ಥೆಯ ಕಟ್ಟಡದಲ್ಲಿದ್ದ ಒಂಭತ್ತು ಮನೆಗಳ ಪೈಕಿ ನಾಲ್ಕು ಮನೆಗಳಲ್ಲಿ ವಾಸವಿದ್ದ ಕುಟುಂಬಗಳು ಮುಂದೇನು ಎನ್ನುವಂತಹ ಪರಿಸ್ಥಿತಿಯಲ್ಲಿದ್ದಾರೆ.

ಮುನ್ನೆಚ್ಚರಿಕೆಯಿಂದಾಗಿ ಒಂಭತ್ತು ಮನೆಗಳ ಪೈಕಿ ಐದು ಕುಟುಂಬಗಳು‌ ಖಾಲಿ‌ ಮನೆ ಮಾಡಿ ಬೇರೆ ಮನೆಗಳಿಗೆ ಸ್ಥಳಾಂತರಗೊಂಡಿದ್ದರು. ನಾಲ್ಕು ಕುಟುಂಬಗಳು ಮಾತ್ರ ಉಳಿದುಒಂಡಿದ್ದರು. ನಿವಾಸಿಗಳ ಬೇಜವಾಬ್ದಾರಿತನಕ್ಕೆ ಮನೆಯಲ್ಲಿದ್ದ ಎಲ್ಲಾ ದಿನ ಬಳಕೆ ವಸ್ತುಗಳು ಕಟ್ಟಡದ ಅವಶೇಷಗಳಡಿ ಸಿಲುಕಿ ನಾಮಾವಶೇಷವಾಗಿವೆ. ಆಹಾರ, ದಿಸಿ ಪದಾರ್ಥಗಳು, ಮಕ್ಕಳ ಪುಸ್ತಕಗಳು, ಉಡುಪುಗಳು, ಫ್ರಡ್ಜ್, ವಾಷಿಂಗ್ ಮಷಿನ್, ಎಲ್ಲವೂ ಉಪಯೋಗಕ್ಕೆ ಬಾರದಾಗಿವೆ.

ಕಟ್ಟಡ ಕುಸಿದ ಕೆಲ ಹೊತ್ತಿನಲ್ಲೇ ಮಹಿಳೆಯರು ಕಟ್ಟಡ ಅವಶೇಷಗಳ ನಡುವೆಯೇ ತಮ್ಮ ವಸ್ತುಗಳನ್ನು ರಾತ್ರಿಯೇ ಹುಡುಕಾಟ ನಡೆಸಿದರು. ಮಹಿಳೆಯರು ತಮ್ಮ ಚಿನ್ನಾಭರಣಗಳನ್ನು ಕಷ್ಟಪಟ್ಟು ಪತ್ತೆ ಹಚ್ಚಿ  ಹುಡಿಕಿ ಸಿಕ್ಕಷ್ಟು ಪಡೆದುಕೊಂಡಿದ್ದಾರೆ.

ಮನೆ ಕುಸಿಯುವದು ಅರಿವಾಗುತ್ತಿದ್ದಂತೆ ವಯಸ್ಸಾದ ಮಹಿಳೆಯೊಬ್ಬರು ಮಗುವಿನೊಂದಿಗೆ  ಕಿಟಕಿ ಮೂಲಕ ಹೊರ ಜಿಗಿದು ಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಕ್ಷಾಂತರ ರೂಪಾಯಿ ವಸ್ತುಗಳು ಮಣ್ಣುಪಾಲಾಗಿದ್ದು, ನಾಲ್ಕು ಕುಟುಂಬಗಳು ಪ್ರಾಣಾಪಾಯದಿಂದ ಪಾರಾಗಿದ್ದರೂ, ಮಂದೇನು ಎನ್ನುವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದವರ ಬಳಿ ಮುಂದೇನು ಎಂದು ಅವಶೇಷಗಳ ಮುಂದೆ ನಿಂತು ಅಂಗಲಾಚುತ್ತಿದ್ದಾರೆ.

ರಾತ್ರಿ ಕಟ್ಟಡ ಕುಸಿದ ಬಳಿಕ ಹೊರ ಬಂದಿರುವ ನಿವಾಸಿಗಳು ಇಡೀ ರಾತ್ರಿ ಮಕ್ಕಳೊಂದಿಗೆ ಜಾಗರಣೆ ಮಾಡಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಲಾಗದೆ ತಾವೂ ಕಚೇರಿಗೆ ಹೋಗಲಾರದೆ ನರಕ ಯಾತನೆ ಅನುಭವಿಸುತ್ತಿದ್ದಾರೆ.

ಮೇಯರ್ ಗಂಗಾಂಬಿಕೆ ,ಪಾಲಿಕೆ ಆಯುಕ್ತ ಅನಿಲ್ ಕುಮಾರ್, ಭೇಟಿ ನೀಡಿ ಪರಿಶೀಲಿಸಿ ಬಿಬಿಎಂಪಿ ಅಧಿಕಾರಿಗಳು ಮತ್ತು ಪೋಲಿಸ್ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಕಟ್ಟಡ ಅವಶೇಷಗಳನ್ನು ತೋರಿಸಿ ಕೂಡಲೇ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಬಿಬಿಎಂಪಿ ಯಿಂದ ಕಟ್ಟಡ ಮಾಲೀಕರ ವಿರುದ್ದ ಪೋಲಿಸರಿಗೆ ದೂರು ನೀಡಲಾಗಿದೆ.

ತಲೆ ಮರೆಸಿಕೊಂಡಿರುವ ಮಾಲೀಕರ ವಿರುದ್ದ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಕಟ್ಟಡ ಮಾಲೀಕರಿಂದ ಅವಶೇಷಗಳನ್ನು ತೆರವುಗೊಳಿಸುವ ಖರ್ಚು ಹಾಗೂ ನಿವಾಸಿಗಳು ಕಳೆದುಕೊಂಡಿರುವ ವಸ್ತುಗಳಿಗೆ ಹಣವನ್ನು ಮಾಲೀಕನಿಂದಲೇ ಕೊಡಿಸುವುದಾಗಿ ಹೇಳಿದ್ದಾರೆ. ಬಿಬಿಎಂಪಿ ಯಿಂದಲೂ ಮಾಲೀಕರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸುವುದಾಗಿ ಆಯುಕ್ತ ಅನಿಲ್ ಕುಮಾರ್  ತಿಳಿಸಿದ್ದಾರೆ.

*ನಿರ್ವಸತಿಗರಾಗಿರುವ ಕುಟುಂಬದವರಿಗೆ ಮನೆ ಮಾಲೀಕರು ಮುಂಗಡ ಹಣ ನೀಡಿಲ್ಲವೆಂದು ಆ ಮನೆಯಲ್ಲೇ ಉಳಿದು ಕೊಂಡಿದ್ದರು. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಿಬಿಎಂಪಿಯಂದ ಮಾಲೀಕರ ವಿರುದ್ದ ಕ್ರಮ ಜರುಗಿಸಲಾಗುದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ತಿಳಿಸಿದ್ದಾರೆ.

*ಶಿಥಿಲಗೊಂಡ ಕಟ್ಟಡದಲ್ಲಿ ವಾಸವಿದ್ದ ಎಲ್ಲರೂ ಬಡ ಜುಟುಂಬಗಳೇ ಆಗಿದ್ದಾರೆ. ಎಲ್ಲವನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಮಾನವೀಯ ದೃಷ್ಟಿಯಿಂದ ಬಿಬಿಎಂಪಿ ಕನಿಷ್ಟ ಒಂದು ಲಕ್ಷ ರೂ ಪರಿಹಾರ ನೀಡುವಂತೆ ಮೇಯರ್ ಅವರಲ್ಲಿ ಮನವಿ ಮಾಡಿದ್ದೇನೆ ಮನೆ ಕಳೆದುಕೊಂಡವರಿಗೆ ಊಟದ ವ್ಯವಸ್ಥೆ ಮಾಡಿದ್ದು, ಇನ್ನೆರಡುದಿನಗಳ ಕಾಲ ಕಟ್ಟಡ ತೆರವು ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos