ನಗರದಲ್ಲಿ ಹೆಚ್ಚಾದ ಪುಂಡರ ವ್ಹೀಲಿಂಗ್!

ನಗರದಲ್ಲಿ ಹೆಚ್ಚಾದ ಪುಂಡರ ವ್ಹೀಲಿಂಗ್!

ಬೆಂಗಳೂರು: ವಾಹನದಲ್ಲಿ ರಸ್ತೆ ಮೇಲೆ ಹೋಗುವಾಗ ಯುವಕರು ಹಚ್ಚಾಟವಾಡುವುದು ಮಿತಿಮೀರಿದೆ. ವ್ಹೀಲಿಂಗ್​, ಯುವತಿಯರನ್ನ ಚುಡಾಯಿಸುವುದು ಮತ್ತು ಅಸಭ್ಯವಾಗಿ ವರ್ತಿಸುವುದು ಹೆಚ್ಚಾಗಿದೆ. ಪೊಲೀಸರು ಎಷ್ಟೇ ಕ್ರಮ ಕೈಗೊಂಡರು ಇವರಿಗೆ ಬುದ್ದಿ ಬರುತ್ತಿಲ್ಲ.

ನಗರದ ಹಲವು ರಸ್ತೆಗಳಲ್ಲಿ ರಾತ್ರಿಯಾಗ್ತಿದ್ದಂತೆಯೇ ಕೆಲ ಯುವಕರ ತಂಡ ಆಕ್ಟೀವ್ ಆಗುತ್ತಿದೆ. ಡಿಸಿಪಿ ಕಚೇರಿ ಸಮೀಪದಲ್ಲೇ ಪುಂಡರು ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದಾರೆ. ದಕ್ಷಿಣ ವಿಭಾಗದ ಡಿಸಿಪಿ ಕಚೇರಿ ಬಳಿಯ ಸೌತ್ ಎಂಡ್ ಸರ್ಕಲ್ ಬಳಿ ರಾತ್ರಿ 11ಗಂಟೆ ಸುಮಾರಿಗೆ ಮೂರು ನಾಲ್ಕು ಡಿಯೋ ಬೈಕ್​ಗಳಲ್ಲಿ ಯುವಕರು ವ್ಹೀಲಿಂಗ್ ಮಾಡಿ ಸವಾರರಿಗೆ ತೊಂದರೆ ಕೊಟ್ಟಿದ್ದಾರೆ. ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳಬಾರದು ಎಂದು ನಂಬರ್ ಪ್ಲೇಟ್ ಇಲ್ಲದ ಬೈಕ್​ಗಳಲ್ಲಿ ವ್ಹೀಲಿಂಗ್ ಮಾಡಿದ್ದಾರೆ. ಅಜಾಗರೂಕತೆ ಚಾಲನೆ, ವ್ಹೀಲಿಂಗ್ ಮಾಡಿ ಬೇರೆ ಸವಾರರಿಗೆ ಕಿರಿಕಿರಿ ಉಂಟು ಮಾಡಿದ್ದಾರೆ. ಸದ್ಯ ಕಾರೊಂದರ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ಯುವಕರ ಪುಂಡಾಟ ಸೆರೆಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos