ಬತ್ತಿದ್ದ ಬಾವಿಯಿಂದ ನೀರು

ಬತ್ತಿದ್ದ ಬಾವಿಯಿಂದ ನೀರು

ಬಾಗಲಕೋಟೆ, ನ. 11: ಇದೀಗ ಅಚ್ಚರಿ ಎನ್ನುವಂತೆ  ಆಕಾಶದಿಂದೆತ್ತರಕ್ಕೆ ನೀರು ಚಿಮ್ಮುತ್ತಿರುವ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದಲ್ಲಿ ನಡೆದಿದೆ. ಬಾದಾಮಿ ತಾಲೂಕಿನಾದ್ಯಂತ ಅಂತರ್ಜಲ ಮಟ್ಟ ರೆಡ್ ಝೋನ್‍ಗೆ ಇಳಿದಿತ್ತು. ಆದರೆ ಈಗ  20 ರಿಂದ 30 ಅಡಿ ಎತ್ತರಕ್ಕೆ ನೀರು ಚಿಮ್ಮುತ್ತಿವೆ.

5 ವರ್ಷಗಳಿಂದ ನೀರಿಲ್ಲದೆ ಒಣಗಿದ್ದ ಕೊಳವೆ ಬಾವಿಯಲ್ಲಿ ನೀರು ಚಿಮ್ಮುತ್ತಿರುವುದು ಎಲ್ಲರಲ್ಲೂ ಆಶ್ಚರ್ಯ ಉಂಟುಮಾಡಿದೆ. ಹೀಗಾಗಿ ನೀರು ಚಿಮ್ಮುತ್ತಿರುವುದನ್ನು ಕಣ್ತುಂಬಿಕೊಳ್ಳಲು ಸುತ್ತಲಿನ ಹಳ್ಳಿಗಳ ಜನರು ನೀಲಗುಂದಕ್ಕೆ ಬರುತ್ತಿದ್ದಾರೆ. ಆಕಾಶದೆತ್ತರಕ್ಕೆ ಚಿಮ್ಮುತ್ತಿರುವ ನೀರು ನೋಡಿ ಖುಷಿಪಟ್ಟಿದ್ದಾರೆ. ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos