ಕೊರೊನ ವಿರುದ್ದ ಸಮರ

ಕೊರೊನ ವಿರುದ್ದ ಸಮರ

ಬೆಂಗಳೂರು, ಮಾ. 27: ಕೊರೊನ ಎಂಬ ಮಹಾಮಾರಿ ಕಾಯಿಲೆ ತಡೆಗಟ್ಟಲು ಈಗಾಗಲೇ ದೇಶದಾದ್ಯಂತ 21 ದಿನ ಘೋಷಣೆ ಮಾಡಲಾಗಿದೆ. ಇದೇ ರೀತಿ ರಾಜ್ಯದಲ್ಲೂ ಸಹ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ಜನರಲ್ಲಿ 21 ದಿನ ದಯವಿಟ್ಟು ಯಾರೂ ಮನೆ ಬಿಟ್ಟು ಹೊರಗೆ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೋಡಿದರೆ ಕಳೆದ ಮೂರು ದಿನಗಳಿಂದ ಅಲ್ಲಲ್ಲಿ ಕೆಲವು ಜನಗಳು ಕಾಣಿಸಿಕೊಳ್ಳುತ್ತಿದ್ದಾರೆ, ಅನಾವಶ್ಯಕವಾಗಿ ಓಡಾಡುವಂತಹ ಜನರಿಗೆ ಪೊಲೀಸರು ಲಾಠಿಚಾರ್ಜ್ ಮಾಡಿ ಜನರನ್ನು ತಡೆಗಟ್ಟಿದ್ದಾದರುರೂ ಸಹ ಸಾರ್ವಜನಿಕರು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದರೂ ಸಹ ಜನರು ಕೆಲವೆಡೆ ಹೊರಗಡೆ ಬಂದು ತಿರುಗಾಡುತ್ತಿದ್ದಾರೆ.

ಹೀಗಾಗಿ ಸಾರ್ವಜನಿಕರೇ ಕೊರೊನ ಎಂಬ ಮಹಾಮಾರಿ ಕಾಯಿಲೆಯನ್ನು ಸ್ವಾಗತ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಹಲವು ದೇಶಗಳಲ್ಲಿ ಚೈನಾ ಫ್ರಾನ್ಸ್ ಅಮೆರಿಕಾ ಇನ್ನುಳಿದ ದೇಶಗಳಲ್ಲಿ ಈಗಾಗಲೇ ಹಲವಾರು ಜನರು ಎಂಬ ಮಹಾಮಾರಿ ಕಾಯಿಲೆಯಿಂದ ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ.

ಇನ್ನೂ ನಮ್ಮ ದೇಶದಲ್ಲೂ ಸಹ ಕೊರೊನ ಸೋಂಕಿನಿಂದ ಕೆಲವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಈ ಕಾಯಿಲೆಯನ್ನು ತಡೆಗಟ್ಟಲು ಇರುವುದು ಒಂದೇ ಒಂದು ಮದ್ದು ಅದು ಮನೆಯಲ್ಲಿರುವುದು ಎಂಬ ಮದ್ದು, ಮನೆಯಲ್ಲಿ ಕೊರೊನ ರೋಗವನ್ನು ತಡೆಗಟ್ಟಬೇಕೆಂದು ಎಲ್ಲರೂ ಪ್ರಾರ್ಥನೆ ಮಾಡಿಕೊಳ‍್ಳುತ್ತಿದ್ದರೂ ಸಹ ಸಾರ್ವಜನಿಕರು ರಸ್ತೆಗಳಲ್ಲಿ ಬರುವ ಮೂಲಕ ಕರುನಾ ರೋಗವನ್ನು ಸ್ವಾಗತ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಪೊಲೀಸರು ತಮ್ಮ ಪ್ರಾಣವನ್ನೇ ಲೆಕ್ಕಿಸದೆ ಸಾರ್ವಜನಿಕರಿಗೆ ಕೊರೊನ ಬಗ್ಗೆ ತಿಳುವಳಿಕೆ ನೀಡುತ್ತಿದ್ದಾರೆ. ಪೊಲೀಸರ ಮಾತು ಕೇಳದಂತಹ ಸಾರ್ವಜನಿಕರಿಗೆ ಲಾಠಿ ಚಾರ್ಜ್ ರುಚಿ ತೋರಿಸುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು ಹಾಗೂ ಪೊಲೀಸರು ಸೇರಿ ಅನಗತ್ಯವಾಗಿ ಹೊರಗಡೆ ಬಂದವರಿಗೆ ಕ್ರಮವಹಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತರಾದ ಭಾಸ್ಕರ್ ಅವರು ಸಹ ಎಚ್ಚರಿಕೆಯನ್ನು ನೀಡಿದ್ದಾರೆ.

ಇನ್ನು ಸಿಲಿಕಾನ್ ಸಿಟಿಯಲ್ಲಿ ಪ್ರತಿನಿತ್ಯ ಸಾವಿರಾರು ಜನರಿಂದ ತುಂಬಿರುವಂತಹ ಮೆಜೆಸ್ಟಿಕ್, ಎಂಜಿ ರೋಡ್, ಬ್ರಿಗೇಡ್ ರೋಡ್ ಶಿವಾಜಿನಗರ ನಗರ ಗಳಂತಹ ಎಲ್ಲ ರಸ್ತೆಗಳು ದಿನನಿತ್ಯ ಟ್ರಾಫಿಕ್ ಗಳಿಂದ ತುಂಬುತ್ತಿದ್ದಂತಹ ಸ್ಥಳಗಳು ಇಂದು ಸಂಪೂರ್ಣ ಸ್ತಬ್ದಗೊಂಡಿದೆ. ಎಲ್ಲಿ ನೋಡಿದರಲ್ಲಿ ಬೆಂಗಳೂರುಸಿಟಿ ಕಾಲಿ ಕಾಲಿ. ಇನ್ನೂ ಬೆಂಗಳೂರು ಒಂದೇ ಅಲ್ಲದೇ ಎಲ್ಲಾ ಗ್ರಾಮಗಳಲ್ಲೂ ಸಹ ಸಂಪೂರ್ಣ ಸ್ಥಬ್ಧವಾಗಿದೆ.

ಇನ್ನೂ ಕೆಲವು ಜಿಲ್ಲೆಗಳ ಕೆಲವು ನಗರಗಳಲ್ಲಿ ತಮ್ಮ ಊರಿಗೆ ಯಾರೊಬ್ಬರ ಬರಬಾರದು ಹಾಗೂ ಹೋಗಬಾರದು ಎಂದು ಚೆನ್ನಾಗಿರುವ ರಸ್ತೆಗಳನ್ನು ಅಗೆದು ಕ್ರಮವನ್ನು ಕೈಗೊಳ್ಳುತ್ತಿದ್ದಾರೆ. ಸರ್ಕಾರ ಹಾಗೂ ಅಧಿಕಾರಿಗಳಲ್ಲಿ ಸಾರ್ವಜನಿಕರ ಸ್ವತಹ ಸ್ವಯಂಘೋಷಿತರಾಗಿ ಮನೆಯಲ್ಲಿದ್ದರೆ ಈ ಕೊರೊನವನ್ನು ತಡೆಗಟ್ಟಬಹುದು ಎಂಬುದನ್ನು ತಿಳಿದುಕೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ಕೋರಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos