ಹೊತ್ತಿ ಉರಿದ ವಿಮಾನ- 41 ಪ್ರಯಾಣಿಕರು ಸುಟ್ಟು ಭಸ್ಮ

ಹೊತ್ತಿ ಉರಿದ ವಿಮಾನ- 41 ಪ್ರಯಾಣಿಕರು ಸುಟ್ಟು ಭಸ್ಮ

ಮಾಸ್ಕೋ, ಮೇ.6, ನ್ಯೂಸ್ ಎಕ್ಸ್ ಪ್ರೆಸ್: ತುರ್ತು ಭೂ ಸ್ಪರ್ಶ ವೇಳೆ ವಿಮಾನದ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡು 41 ಪ್ರಯಾಣಿಕರು ಸಜೀವ ದಹನಗೊಂಡ ಘಟನೆ ರಷ್ಯಾದ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ನಡೆದಿದೆ. ರಷ್ಯಾ ನಿರ್ಮಿತ ಸುಖೋಯ್ ಸೂಪರ್‍ಜೆಟ್ 100 ವಿಮಾನದಲ್ಲಿ ಒಟ್ಟು 73 ಮಂದಿ ಪ್ರಯಾಣಿಕರು, ಐವರು ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಮೊದಲ ಬಾರಿಗೆ ತುರ್ತು ಭೂ ಸ್ಪರ್ಶ ಮಾಡಲು ಯತ್ನಿಸಿದ ಪೈಲಟ್‍ಗೆ ಸಾಧ್ಯವಾಗಿಲ್ಲ. ಬಳಿಕ ಮತ್ತೊಮ್ಮೆ ತುರ್ತು ಭೂ ಸ್ಪರ್ಶ ಮಾಡುವಾಗ ನೆಲಕ್ಕೆ ಟೈರ್ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಕಪ್ಪು ದಟ್ಟ ಹೊಗೆ ವಿಮಾನ ನಿಲ್ದಾಣದಲ್ಲಿ ಆವರಿಸಿತ್ತು. ನಾಲ್ವರು ಮಕ್ಕಳು ಸೇರಿದಂತೆ 41 ಮಂದಿ ನೋಡು ನೋಡುತ್ತಿದ್ದಂತೆ ಸಜೀವ ದಹನವಾಗಿದ್ದಾರೆ. ಅದೃಷ್ಟವಶಾತ್ ವಿಮಾನ ಸ್ಫೋಟಗೊಂಡಿಲ್ಲ. ವಿಮಾನ ನಿಂತ ಬಳಿಕ ತುರ್ತು ನಿರ್ಗಮನ ಮೂಲಕ ಹಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಷ್ಯಾದ ತನಿಖಾ ತಂಡದ ವಕ್ತಾರ ಎಲಿನಾ ಮಾರ್ಕೊಸ್‍ಕಾಯ ಬೆಳಗಿನ ಜಾವ 41 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು. ಆದರೆ ಆರೋಗ್ಯ ಸಚಿವ ವೆರೋನಿಕಾ ಸ್ಕೋವರ್ತಸೋವಾ 38 ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದು, 40 ಮಂದು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಉತ್ತರ ಮರ್ಮನ್ಸ್ಕ್ ನಗರದ ಶೆರ್ಮೆಟಿವೋ ವಿಮಾನ ನಿಲ್ದಾಣದಿಂದ ಈ ವಿಮಾನ ಹಾರಾಟ ಆರಂಭಿಸಿತ್ತು. ಬಳಿಕ ವಿಮಾನದಲ್ಲಿ ತಾಂತ್ರಿಕ ಉಂಟಾಗಿ ಅದು ಹಿಂತಿರುಗಿತ್ತು. ಹಿಂತಿರುಗುತ್ತಿದ್ದಾಗ ವಿಮಾನದಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ತುರ್ತು ಭೂ ಸ್ಪರ್ಶ ಮಾಡಿದ್ದಾರೆ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ತಿಳಿಸಿದ್ದಾರೆ. ಸದ್ಯ ಬೆಂಕಿ ಹೊತ್ತಿಕೊಂಡ ವಿಡಿಯೋ ವೈರಲ್ ಆಗಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಲು ರಷ್ಯಾ ಸರ್ಕಾರ ವಿಶೇಷ ತನಿಖಾ ತಂಡವನ್ನು ರೂಪಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos