ವಿಜಯಪುರದ ಗೋಳಗುಮ್ಮಟಕ್ಕೆ ಹುಸಿಬಾಂಬ್!

ವಿಜಯಪುರದ ಗೋಳಗುಮ್ಮಟಕ್ಕೆ ಹುಸಿಬಾಂಬ್!

ವಿಜಯಪುರ: ವಿಜಯಪುರದ ಗೋಳಗುಮ್ಮಟಕ್ಕೆ ಹುಸಿಬಾಂಬ್ ಬೆದರಿಕೆಯ ಕರೆ ಬಂದಿದೆ. ಇತ್ತೀಚಿಗೆ ಇದು ಯಾಕೋ ತುಂಬಾ ಆಗ್ತಾ ಇದೆ. ಹುಸಿಬಾಂಬ್ ಬೆದರಿಕೆಯ ಇ ಮೇಲ್‌  ಇಲ್ಲಾಂದ್ರೆ ಕಾಲ್ ಮಾಡುವುದು. ವಿಜಯಪುರದ ಗೋಳಗುಮ್ಮಟಕ್ಕೆ ಹುಸಿಬಾಂಬ್ ಬೆದರಿಕೆ ಗೋಳಗುಮ್ಮಟ ಎದುರಿನ ಮ್ಯೂಸಿಯಂನಲ್ಲಿ ಬಾಂಬ್ ಇಟ್ಟಿದ್ದೇವೆ ಎಂದು ಆಡಳಿತ ಕಚೇರಿಗೆ ಹುಸಿಬಾಂಬ್ ಸಂದೇಶ ಸಲ್ಲಿಸಿದ್ದಾರೆ.‌

ಮ್ಯೂಸಿಯಂನ ಹಲವು ಜಾಗದಲ್ಲಿ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಬಂದಿದೆ. ಟೆರರೈಸರ್ಸ್ ಗ್ರೂಪ್ ಹೆಸರಿನಲ್ಲಿ ಇ-ಮೇಲ್ ಬಂದಿದೆ. ನಿನ್ನೆ ಸಾಯಂಕಾಲ ಇ-ಮೇಲ್ ಸಂದೇಶ ವೀಕ್ಷಿಸಿರುವ ಗೋಳಗುಮ್ಮಟಕ್ಕೆ ಸಿಬ್ಬಂದಿ, ಬಳಿಕ ಪೊಲೀಸರಿಗೆ ಮಾಹಿತಿ‌ ತಿಳಿಸಿದ್ದಾರೆ.  ತಡರಾತ್ರಿ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆಸಲಾಗಿದೆ. ಯಾವುದೇ ಬಾಂಬ್ ಪತ್ತೆ ಇಲ್ಲ ಅಂತ ಪೊಲೀಸರಿಂದ ದೃಢೀಕರಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos