ವಿಧಾನಸಭಾ ಚುನಾವಣೆಗೆ ಅಭಿಷೇಕ್ ಗೌಡ.!

ವಿಧಾನಸಭಾ ಚುನಾವಣೆಗೆ ಅಭಿಷೇಕ್ ಗೌಡ.!

ಮಂಡ್ಯ, ಏ. 23, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯ ಕಾವು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಇಂದು ಕೂಡ 2ನೇ ಹಂತದ ಮತದಾನ ನಡೆಯುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗ ನಿಖಿಲ್ ಹಾಗೂ ಸುಮಲತಾ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು.ಇದೀಗ ರೆಬಲ್ ಸ್ಟಾರ್ ಮಗಕೂಡ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ರೆಬೆಲ್ ಸ್ಟಾರ್ ಅಂಬರೀಷ್ ಮಗ ಅಭಿಷೇಕ್ ಗೌಡ ಅವರು ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸೋಷಿಯಲ್ ಮಿಡಿಯಾದಲ್ಲಿ  ಕೆಲ ಪೋಸ್ಟರ್ಗಳು ವೈರಲ್ ಆಗಿದೆ.

ಎಸ್. ಡಿ.ಸಿ. ತಮ್ಮಣ್ಣ ಯಾವುದಕ್ಕೂ ರೆಡಿ ಇರು. ಮುಂದೆ ನಿನ್ನ ಎದುರಾಳಿ ಅಭಿಷೇಕ್ ಅಂಬರೀಷ್, ತಾಕತ್ ಇದ್ದರೆ ಫೇಸ್ ಮಾಡು ಎಂದು ಅಂಬರೀಷ್ ಅಭಿಮಾನಿಗಳು ಫೇಸ್ಬುಕ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದು ಈ ಅನುಮಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಮದ್ದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ದೊಡ್ಡರಸಿನಕೆರೆ ಅಂಬರೀಷ್ ಅವರ ಹುಟ್ಟೂರು ಇದಲ್ಲದೇ ಸಾಕಷ್ಟು ಜನರು ಅಂಬರೀಶ್ ಅಭಿಮಾನಿಗಳು ಹಾಗೂ ಅಂಬರೀಶ್ ಸಂಬಂಧಿಕರು ಇರುವ ಕಾರಣದಿಂದ ಇಲ್ಲಿಂದಲೇ ತಮ್ಮ ರಾಜಕೀಯ ಜರ್ನಿಯನ್ನು ಶುರುಮಾಡುವುದಕ್ಕೆ ರೆಬೆಲ್ ಸ್ಟಾರ್ ಅಂಬರೀಷ್ ಮಗ ಅಭಿಷೇಕ್ ಗೌಡ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

 

ಫ್ರೆಶ್ ನ್ಯೂಸ್

Latest Posts

Featured Videos