ತಮಟೆ ಏಟಿಗೆ ಸಖತ್ ಸ್ಟೆಪ್ಸ್ ಹಾಕಿದ ಶಾಸಕ ವೆಂಕಟರಮಣಯ್ಯ

ತಮಟೆ ಏಟಿಗೆ ಸಖತ್ ಸ್ಟೆಪ್ಸ್ ಹಾಕಿದ ಶಾಸಕ ವೆಂಕಟರಮಣಯ್ಯ

ದೊಡ್ಡಬಳ್ಳಾಪುರ, ಡಿ. 21: ಊರ ಹಬ್ಬ ಹಾಗೂ ಜಾತ್ರೆ ಸಂಭ್ರಮದ ವೇಳೆ ದೊಡ್ಡಬಳ್ಳಾಪುರ ವಿಧಾನಸಭಾ ಕಾಂಗ್ರೆಸ್ ಶಾಸಕ ವೆಂಕಟರಮಣಯ್ಯ ಸಖತ್ ಸ್ಟೆಪ್ಸ್ ಹಾಕಿದ್ದಾರೆ.

ಬೆಂಗಳೂರು ಹೊರವಲಯದ ದೊಡ್ಡಬಳ್ಳಾಪುರ ತಮ್ಮ ಸ್ವಗ್ರಾಮದ ಹುಲಿಕುಂಟೆಯಲ್ಲಿ ನಡೆದ ಊರ ಹಬ್ಬ ಹಾಗೂ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ದೇವರ ಉತ್ಸವ ನಡೆಯುತ್ತಿರುವ ಸಂದರ್ಭದಲ್ಲಿ ಮಕ್ಕಳು ತಮಟೆ ಏಟಿಗೆ ಡ್ಯಾನ್ಸ್ ಮಾಡಿ ಎಂಜಾಯ್ ಮಾಡುತ್ತಿದ್ದರು. ಈ ವೇಳೆ ಶಾಸಕರ ಗಮನ ಸೆಳೆದು ತಮಟೆ ಏಟು ತಾನೂ ಸ್ಟೇಪ್ಸ್ ಹಾಕುವಂತೆ ಮಾಡಿತು. ಮಕ್ಕಳ ಜೊತೆ ತಮಟೆ ಏಟಿಗೆ  ಸಖತ್ ಸ್ಟೆಪ್ಸ್ ಹಾಕಿ ಮಕ್ಕಳನ್ನೂ ನಾಚುವಂತೆ ಶಾಸಕ ವೆಂಕಟರಮಣಯ್ಯ ನೃತ್ಯ ಮಾಡಿದರು. ಶಾಸಕರ ಡ್ಯಾನ್ಸ್ ಸ್ಥಳೀಯರ ಕಣ್ಣು ಹುಬ್ಬೇರಿಸುವಂತೆ ಮಾಡಿತ್ತು. ಇನ್ನೂ ಶಾಸಕರ ತಮಟೆ ಸ್ಟೆಪ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಫ್ರೆಶ್ ನ್ಯೂಸ್

Latest Posts

Featured Videos