ಪ್ರತಿಷ್ಟೆಗಾಗಿ ವಜ್ಜಲ್ ಎರಡನೇ ಬಾರಿಗೆ ಭೂಮಿ ಪೂಜೆ : ಲಿಂಗರಾಜ ಟೀಕೆ

ಪ್ರತಿಷ್ಟೆಗಾಗಿ ವಜ್ಜಲ್ ಎರಡನೇ ಬಾರಿಗೆ ಭೂಮಿ ಪೂಜೆ : ಲಿಂಗರಾಜ ಟೀಕೆ

ಹಟ್ಟಿ ಚಿನ್ನದಗಣಿ :ಶಿಷ್ಟಾಚಾರದ ಬಗ್ಗೆ ಮಾತನಾಡುವ ಮಾಜಿ ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್ ಈ ಹಿಂದೆ ಲಿಂಗಸಗೂರು ಕ್ಷೇತ್ರದ ಶಾಸಕರಾಗಿದ್ದಾಗ ಅಂದಿನ ಲೋಕಸಭಾ ಸದಸ್ಯರಾಗಿದ್ದ ಬಿ.ವಿ ನಾಯಕ ಅವರನ್ನು ಹಟ್ಟಿ ಸರಕಾರಿ ಆಸ್ಪತ್ರೆಯ ಭೂಮಿ ಪೂಜೆಗೆ ಆಹ್ವಾನಿಸದೇ ಶಂಕುಸ್ಥಾಪನೆ ನೇರವೇರಿಸಲು ಬಂದಿದ್ದರು.
ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳನ್ನು ಕೈಬಿಟ್ಟು ಭೂಮಿ ಪೂಜೆ ಮಾಡಬೇಕೆಂದು ತೀರ್ಮಾನಕ್ಕೆ ಬಂದಾಗ ಅಂದಿನ ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್‍ರಿಗೆ ಸೆಡ್ಡು ಹೊಡೆದು, ಗ್ರಾ.ಪಂ ಅಧ್ಯಕ್ಷ ಶಂಕರಗೌಡ ಬಳಗಾನೂರು, ತಾ.ಪಂ ಸದಸ್ಯ ಎಂ.ಲಿಂಗರಾಜು, ಜಿ.ಪಂ ಸದಸ್ಯೆ ಸಾಹೆರಾಬೇಗಂ ಹಾಗೂ ಸ್ಥಳೀಯ ಮುಖಂಡರು ಒಟ್ಟಾರೆ ಸೇರಿಕೊಂಡು ನೂತನ ಸರ್ಕಾರಿ ಆಸ್ಪತ್ರೆಯ ಭೂಮಿ ಪೂಜೆಯನ್ನು ನೇರವೆರಿಸಿದ್ದರು. ಆದರೆ ಮಾನಪ್ಪ ವಜ್ಜಲ್ ಆ ಅವಮಾನ ತಾಳಲಾರದೆ ತನ್ನ ಪ್ರತಿಷ್ಟೆಗಾಗಿ ಪೋಲಿಸ್ ಸಹಕಾರದಿಂದ ಎರಡನೇ ಬಾರಿಗೆ ಪೂಜೆ ಮಾಡಿದ್ದರು. ದುರ್ದೈವ ಎಂದರೆ ಆಸ್ಪತ್ರೆ ಕಟ್ಟಡ ಕಾಮಗಾರಿ ಮುಗಿದು ಉದ್ಘಾಟನೆ ಆಗುವ ಹೊತ್ತಿಗೆ ಅಧಿಕಾರ ಕಳೆದುಕೊಂಡರು ಎಂದು ಮಾಜಿ ತಾ.ಪಂ ಸದಸ್ಯ ಎಂ.ಲಿಂಗರಾಜು ಟೀಕಿಸಿದ್ದಾರೆ.
ಹಟ್ಟಿ-ಚಿಂಚರಕಿ ರಸ್ತೆಗೆ ಸಂಬಂಧಪಟ್ಟ ಅಧಿಕಾರಿಗಳು ಶಿಷ್ಟಾಚಾರದ ಪ್ರಕಾರ ಎಲ್ಲ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ ನಂತರ ಕಾಮಗಾರಿಯ ಭೂಮಿ ಪೂಜೆಯನ್ನು ನೇರವೆರಿಸಿದ್ದರು. ಹಟ್ಟಿ ಅಧ್ಯಕ್ಷ ಮಾನಪ್ಪ ವಜ್ಜಲ್ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಬಾರದೆ ಅಗೌರವ ತೋರಿದ್ದರು.
ಮಾನಪ್ಪ ವಜ್ಜಲ್ ಹತ್ತು ವರ್ಷಗಳ ಕಾಲ ಲಿಂಗಸಗೂರು ಕ್ಷೇತ್ರದ ಶಾಸಕರಾಗಿದ್ದಾಗ ಶೂನ್ಯ ಅಭಿವೃದ್ಧಿ ಕಾರ್ಯಗಳಾದ ಕಾರಣ ಕ್ಷೇತ್ರದ ಜನತೆ ಅವರಿಗೆ ತಕ್ಕ ಪಾಠ ಕಲಿಸಿದ್ದರು. ಶಾಸಕ ಡಿ.ಎಸ್.ಹೂಲಗೇರಿ ಮಾಡಿದ ರಸ್ತೆ ಕಾಮಗಾರಿ ಭೂಮಿ ಪೂಜೆಗೆ ಎರಡನೇ ಬಾರಿಗೆ ಕೆಲವೇ ಅಧಿಕಾರಿ, ಪೊಲೀಸ್ ಸಹಕಾರದಿಂದ ಮಾನಪ್ಪ ವಜ್ಜಲ್ ತನ್ನ ಪ್ರತಿಷ್ಟೆಗಾಗಿ ಹಟ್ಟಿ-ಚಿಂಚರಕಿ ರಸ್ತೆಗೆ ಅದೇ ವಂದಲಿಕ್ರಾಸ್ ಬಳಿ ಭೂಮಿ ಪೂಜೆ ನೇರವೆರಿಸಿದರು. ರಸ್ತೆ ಕಾಮಗಾರಿ ಆರಂಭವಾಗಿ ಮುಗಿಯುವ ಹೊತ್ತಿಗೆ ಮೊದಲಿನಂತೆ ಈಗಲೂ ನಿಗಮದ ಅಧಿಕಾರ ಹೋದರೆ ಅಚ್ಚರಿ ಪಡಬೇಕಾಗಿಲ್ಲ ಎಂದು ಎಂ.ಲಿಂಗರಾಜು ಹಾಸ್ಯಸ್ಪದವಾಗಿ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos