ವೈದ್ಯರ ನಿರ್ಲಕ್ಷ್ಯ: ಪತ್ರಕರ್ತೆ ಸಾವು

ವೈದ್ಯರ ನಿರ್ಲಕ್ಷ್ಯ: ಪತ್ರಕರ್ತೆ ಸಾವು

ಉಡುಪಿ, ಮೇ. 9, ನ್ಯೂಸ್ ಎಕ್ಸ್ ಪ್ರೆಸ್: ವೈದ್ಯರ ಎಡವಟ್ಟಿನಿಂದ  ಮಣಿಪಾಲ ಆಸ್ಪತ್ರೆ ಪತ್ರಕರ್ತೆ ಒಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.

ಸಾಸ್ತಾನ ಬಳಿಯ ಗುಂಡ್ಮಿಯ ಅರ್ಚನಾ ಗುಂಡ್ಮಿ ಮೃತಪಟ್ಟ ಯುವ ಪತ್ರಕರ್ತೆಯಾಗಿದ್ದಾರೆ. ಕೆಲವು ಸಮಯ ಪ್ರೈಮ್ ಟಿವಿ ಸುದ್ದಿ ಸಂಪಾದಕಿಯಾಗಿದ್ದರು. ನಂತರ ಖಾಸಗಿ ವಾಹಿನಿಗಳಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದರು.

ಹೆಚ್1 ಎನ್1 ಕಾಯಿಲೆ ಚಿಕಿತ್ಸೆಗೆ ಕಳೆದ 18 ದಿನಗಳ ಹಿಂದೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಆರಂಭದಲ್ಲಿ ಬಂದ ರಿಪೋರ್ಟ್ ನಲ್ಲಿ ಮಣಿಪಾಲದ ವೈದ್ಯರು ಹೆಚ್1 ಎನ್1 ಇಲ್ಲ ಎಂದು ಕುಟುಂಬಸ್ಥರ ಬಳಿ ತಿಳಿಸಿದ್ದರು. ನಂತರ ಪುಣೆಯಿಂದ ಬಂದ ವರದಿಯಲ್ಲಿ ಹೆಚ್1 ಎನ್1 ಇರುವುದರ ಬಗ್ಗೆ ಪತ್ತೆಯಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ನಡೆದಾಡುಕೊಂಡು ಆರೋಗ್ಯವಂತರಾಗಿಯೇ ಬಂದಿದ್ದ ಅರ್ಚನಾಗೆ ಚೆನ್ನಾಗಿಯೇ ಚಿಕಿತ್ಸೆ ನಡೆಯುತ್ತಿತ್ತು. ಅರ್ಚನಾ ಚೇತರಿಸಿಕೊಂಡಿದ್ದರು. ಸುಮಾರು 2 ಲಕ್ಷದವರೆಗೆ ಆಸ್ಪತ್ರೆ ಚಿಕಿತ್ಸೆಯನ್ನು ಕುಟುಂಬಸ್ಥರು ಭರಿಸಿದ್ದರು.

ನಂತರ ಆಯೂಷ್ಮಾನ್ ಭಾರತ್ ಕಾರ್ಡ್ ಇರೋಂದರಿಂದ ಅದರ ಮೂಲಕ ಚಿಕಿತ್ಸೆ ಮುಂದುವರೆಸಲು ಮುಂದಾದ ಕಾರಣ ಆಸ್ಪತ್ರೆ ಆಡಳಿತ ಮಂಡಳಿ ಚಿಕಿತ್ಸೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು ಅನ್ನೋದು ಕುಟುಂಬಸ್ಥರ ಆರೋಪವಾಗಿದೆ.

ಅರ್ಚನಾ ಆರೋಗ್ಯ ಹದಗೆಡುತ್ತಾ ಗಂಭೀರ ಸ್ಥಿತಿ ಪಡೆಯುತ್ತಿದ್ದಂತೆ ಕುಟುಂಬಸ್ಥರಿಗೆ ಸಂಶಯ ಬಂದು ಕೇಳಿದಾಗ ಬದುಕುಳಿಯುವ ಸಾಧ್ಯತೆ ಕಮ್ಮಿ ಅನ್ನೋದನ್ನು ಉಡಾಫೆಯಾಗಿ ವೈದ್ಯರು ಹೇಳಿದ್ದಾರೆ ಅನ್ನೋದು ಕುಟುಂಬಸ್ಥರ ಆರೋಪವಾಗಿದೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos