ಕಾಳಿ ನದಿಗೆ ಹೊಸ ಯೋಜನೆ

ಕಾಳಿ ನದಿಗೆ ಹೊಸ ಯೋಜನೆ

ನವದೆಹಲಿ, ಜು.0 5 : ಉತ್ತರ ಕನ್ನಡದಲ್ಲಿ ಹರಿಯುವ ಕಾಳಿ ನದಿ ನೀರನ್ನು ಉತ್ತರ ಕರ್ನಾಟಕದ ಜಿಲ್ಲೆಗಳ ಕುಡಿಯುವ ನೀರಿಗಾಗಿ ಹೊಸ ಯೋಜನೆ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಶೆಖಾವತ್  ಮುಂದೆ ಸಂಸದರು,ಮಠಾಧೀಶರು ಮತ್ತು ತಂತ್ರಜ್ಞರ ನಿಯೋಗ ಮಂಡಿಸಿದೆ.

ನಿಯೋಗ ನೀಡಿರುವ ಮಾಹಿತಿ  ಪಡೆದಿರುವ ಕೇಂದ್ರ ಸಚಿವರು ಯೋಜನೆಯನ್ನು ಅವಲೋಕಿಸುವ ಭರವಸೆಯನ್ನು ನೀಡಿರುವುದಾಗಿ ಎಂದು ಭೇಟಿಯ ಬಳಿಕ ನಿಯೋಗದ ಸದಸ್ಯರು ಹೇಳಿದ್ದಾರೆ.  25 ಟಿಎಂಸಿ ನೀರನ್ನು ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಹಾವೇರಿ, ಬಾಗಲಕೋಟೆ, ಬಿಜಾಪುರ ಜಿಲ್ಲೆಗಳ ಕುಡಿಯುವ ನೀರು ಮತ್ತು ನೀರಾವರಿ ಬೇಡಿಕೆಗಳಿಗೆ ಪೂರೈಸುವುದು ಈ ಯೋಜನೆಯ ಆಶಯವಾಗಿದೆ. ಶಾಸಕ ಮುರುಗೇಶ ನಿರಾಣಿ, ಸಂಸದರಾದ ಜಿ.ಎಂ.ಸಿದ್ಧೇಶ್ವರ, ಶಿವಕುಮಾರ ಉದಾಸಿ, ಶೋಭಾ ಕರಂದ್ಲಾಜೆ, ಬಿ.ವೈ.ರಾಘವೇಂದ್ರ, ಪಿ.ಸಿ ಗದ್ದಿಗೌಡರ್, ಶಿವಕುಮಾರ್ ಉದಾಸಿ ಸೇರಿ ಹಲವರು ಆಯೋಗ ದಲ್ಲಿದ್ದರು.

 

 

ಫ್ರೆಶ್ ನ್ಯೂಸ್

Latest Posts

Featured Videos