ನೀರು ಬಳಸುವ ಮುನ್ನ ಮೈ ಎಲ್ಲಾ ಕಣ್ಣಾಗಿದ್ರೆ ಒಳ್ಳೇದು, ಇಲ್ಲಾಂದ್ರೆ ಬೀಳುತ್ತದೆ ಬಾರಿ ದಂಡ!

ನೀರು ಬಳಸುವ ಮುನ್ನ ಮೈ ಎಲ್ಲಾ ಕಣ್ಣಾಗಿದ್ರೆ ಒಳ್ಳೇದು, ಇಲ್ಲಾಂದ್ರೆ ಬೀಳುತ್ತದೆ ಬಾರಿ ದಂಡ!

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಈ ಬಾರಿ ಬೇಸಿಗೆಯ ಆರಂಭದಲ್ಲೇ ತೀವ್ರ ಜಲಕ್ಷಾಮ ಕಂಡುಬರ್ತಿದ್ದು ಅಧಿಕಾರಿಗಳು ಈಗ ಎಚ್ಚರಗೊಂಡಿದ್ದಾರೆ. ಸದ್ಯ ಲಭ್ಯವಿರುವ ನೀರನ್ನೇ ಬೆಂಗಳೂರಿನ ಜನರಿಗೆ ಸರಿ ಹೊಂದಿಸುವ ನಿಟ್ಟಿನಲ್ಲಿ ಮುನ್ನೆಚರಿಕಾ ಕ್ರಮಗಳಿಗೆ ಜಲಮಂಡಳಿ ಮುಂದಾಗಿದೆ. ಹಾಗಾಗೀ ನೀವೇನಾದ್ರೂ ವ್ಯರ್ಥವಾಗಿ ನೀರು ಪೋಲ್ ಮಾಡಿದ್ರೆ 5000/- ದಂಡ ಕಟ್ಟಬೇಕಾಗುತ್ತೆ ಹುಷಾರ್ !

ಬೆಂಗಳೂರಲ್ಲಿ ಸುಮಾರು 1.40 ಕೋಟಿ ಜನಸಂಖ್ಯೆಯಿದ್ದು, ನೀರು ಪೂರೈಕೆ ಸವಾಲಾಗಿದೆ.. ಹೀಗಾಗಿ ಪ್ರಮುಖ ಗ್ರಾಹಕರ ನೀರಿನ ಪೂರೈಕೆಯಲ್ಲಿ ಶೇಕಡ 20 ರಷ್ಟು ನೀರನ್ನ ಕಡಿತಗೊಳಿಸಲು ನಿರ್ಧರಿಸಲಾಗಿದೆ.. ಮಾರ್ಚ್ 15 ರಿಂದ ಹಂತಹಂತವಾಗಿ ಕಾವೇರಿ ನೀರನ್ನ ಕಡಿತಗೊಳಿಸಲಾಗುವುದು. ಏಪ್ರಿಲ್ 1ರಿಂದ ಶೇಕಡ 20ರಷ್ಟು ನೀರನ್ನ ಸಂಪೂರ್ಣವಾಗಿ ಕಡಿತಗೊಳಿಸಲು ಮಂಡಳಿ ನಿರ್ಧರಿಸಿದೆ.

ಕಾರು ವಾಷಿಂಗ್, ಆಕರ್ಷಕ ಕಾರಂಜಿ ಸೇರಿದಂತೆ ಇತರೆ ಬಳಕೆಗೆ ಕುಡಿಯುವ ನೀರನ್ನ ಬಳಸದಂತೆ ಈ ಹಿಂದೆಯೇ ಸೂಚನೆ ಕೊಟ್ಟಿದ್ದ ಜಲಮಂಡಳಿ, ಇದೀಗ ಕುಡಿಯೋ ನೀರನ್ನ ಈಜುಕೊಳಕ್ಕೆ ಬಳಸದಂತೆ ಆದೇಶ ಕೊಟ್ಟಿದೆ. ಒಂದ್ವೇಳೆ ನಿಯಮ ಮೀರಿದ್ರೆ 5 ಸಾವಿರ ದಂಡ ಬೀಳಲಿದೆ. ಸಾರ್ವಜನಿಕವಾಗಿ ನಿಯಮ ಉಲ್ಲಂಘನೆ ಕಂಡುಬಂದ್ರೆ, 1916 ನಂಬರ್‌ಗೆ ಕಾಲ್ ಮಾಡಿ ದೂರು ಸಲ್ಲಿಸಬಹುದು

ಫ್ರೆಶ್ ನ್ಯೂಸ್

Latest Posts

Featured Videos