ಆಂಧ್ರದಲ್ಲೂ ‘ಉಪ್ಪಿ’ ಹವಾ!

ಆಂಧ್ರದಲ್ಲೂ ‘ಉಪ್ಪಿ’ ಹವಾ!

ಹೈದರಬಾದ್, ಜೂ. 20 : ಆಂಧ್ರ ಪ್ರದೇಶದಲ್ಲೂ ಜೋರಾಗಿದೆ ಉಪೇಂದ್ರ ಹವಾ.  ಜನ, ಉಪೇಂದ್ರ ಅಂದ್ರೆ ಡಿಫೆರೆಂಟ್‌ ಅಂತಾರೆ. ನಿಜಕ್ಕೂ ಡಿಫೆರೆಂಟ್‌ ಅವರಲ್ಲ, ಅವರು ಬುದ್ಧಿವಂತರು. ನೀವು ಡಿಫೆರೆಂಟ್‌ ಆಗಿರಬೇಡಿ ಅಂತ ಪ್ರೇಕ್ಷಕರಿಗೆ ರಿಯಾಲಿಸ್ಟಿಕ್‌ ಸಿನಿಮಾ ಕೊಟ್ಟು, ರಿಯಲ್‌ ಸ್ಟಾರ್‌ ಎನಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದ ಅವರ ಸಿನಿಮಾ ಅಭಿಮಾನಿ ಹೆಸರು ಸಿದ್ಧಾರ್ಥ. ವಿಶಾಖಪಟ್ಟಣ ನಿವಾಸಿ. ಆತ ಉಪೇಂದ್ರರನ್ನು ಫೋನ್‌ ಮಾಡಿ ವಿಷ್‌ ಮಾಡಿದ್ರಂತೆ. ಅಂದಿನಿಂತ ಆತ ಉಪೇಂದ್ರ ಅವರ ಫಕ್ಕಾ ಫ್ಯಾನ್‌. ಅಷ್ಟೇ ಅಲ್ಲ, ಉಪೇಂದ್ರ ಅಭಿನಯದ ಬಹುತೇಕ ಸಿನಿಮಾ ನೋಡಿದ ಹೆಗ್ಗಳಿಕೆ ಸಿದ್ದಾರ್ಥ ಅವರದ್ದು ಉಪೇಂದ್ರ ತೆಲುಗಿನಲ್ಲಿ ಅಭಿನಯಿಸುವ ಸಿನಿಮಾಗಳಿಗೆ ಆತ ಕಾಯಂ ಪ್ರೇಕ್ಷಕ. ಉಪೇಂದ್ರ ಅಂದ್ರೆ ಮುಗಿಬೀಳುವ ದೊಡ್ಡ ಅಭಿಮಾನಿ ಬಳಗ ಆಂಧ್ರದಲ್ಲೂ ಇದೆ. ಕನ್ನಡದಲ್ಲಿರುವಷ್ಟೇ ಉಪ್ಪಿಗೆ ಅಲ್ಲೂ ಕ್ರೇಜ್‌ ಇದೆ. ಉಪ್ಪಿ ಸಿನಿಮಾ ಅಂದ್ರೆ ಅಲ್ಲಿನ ಬಹಳಷ್ಟುಸಿನಿಮಾ ಪ್ರೇಮಿಗಳಿಗೆ ಒಂಥದ ಕಿಕ್‌ ಅಂತೆ. ಬಹುತೇಕರಿಗೆ ರಿಪ್ರೆಷ್‌ ಆಗೋದಿಕ್ಕೆ ಟ್ರಿಟ್‌ಮೆಂಟ್‌ ಅಂತೆ. ಇದೆಲ್ಲ ಒಂದಷ್ಟುಗೊತ್ತಾಗಿದ್ದು ಇತ್ತೀಚೆಗಷ್ಟೇ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಲ್ಲಿ ನಡೆದ ‘ಐ ಲವ್‌ ಯೂ’ ಚಿತ್ರದ ಟ್ರೇಲರ್‌ ಲಾಂಚ್‌ ಸಂದರ್ಭ.

 

 

ಫ್ರೆಶ್ ನ್ಯೂಸ್

Latest Posts

Featured Videos