ಅಂಡರ್- 19 ಕಿರಿಯ ಭಾರತೀಯರ ಆಟ ಭರ್ಜರಿ

ಅಂಡರ್- 19 ಕಿರಿಯ ಭಾರತೀಯರ ಆಟ ಭರ್ಜರಿ

ದಕ್ಷಿಣ ಆಫ್ರಿಕಾ, ಡಿ. 31 : ಭಾರತ ಅಂಡರ್-19 ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ದ.ಆಫ್ರಿಕಾ ಅಂಡರ್-19 ವಿರುದ್ಧ ಸರಣಿ ವಶಪಡಿಸಿಕೊಂಡಿದೆ. ನಿನ್ನೆ ನಡೆದ ಅಂತಿಮ ಪಂದ್ಯದಲ್ಲಿ ಸೋಲುಂಡಿತಾದರು, ಮೊದಲೆರಡು ಪಂದ್ಯ ಗೆದ್ದ ಪರಿಣಾಮ 2-1 ಅಂತರದಿಂದ ಸರಣಿ ಗೆದ್ದು ಬೀಗಿದೆ. ಭಾರತ 9 ವಿಕೆಟ್ಗಳ ಹಾಗೂ ಎರಡನೇ ಪಂದ್ಯದಲ್ಲಿ 8 ವಿಕೆಟ್ಗಳ ಜಯ ಸಾಧಿಸಿತ್ತು. ಆದರೆ, ವೈಟ್ವಾಶ್ ಮಾಡುವಲ್ಲಿ ಎಡವಿತು. ಈಸ್ಟ್ ಲಂಡನ್ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಸಂಪೂರ್ಣ ವೈಫಲ್ಯ ಅನುಭವಿಸಿತು.

ಭಾರತ 50 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತಷ್ಟೆ. ಆಫ್ರಿಕಾ ಪರ ಅಚಿಲ್ ಕ್ಲೋಟ್ ಹಾಗೂ ಫೆಕೊ ಮೊಲೆಟ್ಸೇಲ್ ತಲಾ 2 ವಿಕೆಟ್ ಪಡೆದರು. 193 ರನ್ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ಆಫ್ರಿಕಾ ಅಂಡರ್-19 ತಂಡ ನಾಯಕನ ಭರ್ಜರಿ ಆಟದ ನೆರವಿನಿಂದ ಗೆಲುವು ಸಾಧಿಸಿತು. ಆರಂಭದಲ್ಲಿ ಎಡವಿತಾದರು ನಾಯಕ ಜೊನಥನ್ ಬರ್ಡ್ 151 ಎಸೆತಗಳಲ್ಲಿ ಅಜೇಯ 88 ರನ್ ಗಳಿಸಿ ಗೆಲುವು ತಂದಿಟ್ಟರು.ಮಗಳು ಸಮೈರಾ ಮೊದಲ ವರ್ಷದ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ ರೋಹಿತ್ ಶರ್ಮಾ! ಆಫ್ರಿಕಾ ಅಂಡರ್-19 ತಂಡ 48.2 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 193 ರನ್ ಬಾರಿಸಿ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಭಾರತ ಪರ ಯಶಸ್ವಿ ಜೈಸ್ವಾಲ್ 2 ವಿಕೆಟ್ ಕಿತ್ತು ಮಿಂಚಿದರು.

ಫ್ರೆಶ್ ನ್ಯೂಸ್

Latest Posts

Featured Videos