ಟಿವಿ ಬ್ಲಾಸ್ಟ್ ಆಗಿ 3 ಮಕ್ಕಳ ಸಾವು

ಟಿವಿ ಬ್ಲಾಸ್ಟ್ ಆಗಿ 3 ಮಕ್ಕಳ ಸಾವು

ಲಕ್ನೋ, ಏ. 3, ನ್ಯೂಸ್ ಎಕ್ಸ್ ಪ್ರೆಸ್: ಉತ್ತರ ಪ್ರದೇಶದ ಬದಾಯುನ್ ಜಿಲ್ಲೆಯ ಕೈಮೋಲಿ ಎಂಬ ಗ್ರಾಮದಲ್ಲಿ ಟಿವಿ ಸ್ಫೋಟದಿಂದಾಗಿ 3 ಮಕ್ಕಳು ಮೃತಪಟ್ಟಿದ್ದಾರೆ. ಸ್ಫೋಟದ ಸದ್ದು ಕೇಳುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಜನ ಭೀಕರ ದೃಶ್ಯವನ್ನು ಕಂಡು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ದೌಡಾಯಿಸಿದ ಪೊಲೀಸರು ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಮಕ್ಕಳು ಮೃತ ಪಟ್ಟಿದ್ದರು ಎನ್ನಲಾಗಿದೆ.

ಮಾಹಿತಿಯ ಪ್ರಕಾರ, ಬದಾಯುನ್ ಜಿಲ್ಲೆಯ ಉಜನಿ ಕೋಟ್ವಾಲಿಯ ಕೈಮೋಲಿ  ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಲ್ಲಿ, ಒಂದೇ ಕುಟುಂಬದ 4 ಮಕ್ಕಳು ಒಟ್ಟಿಗೆ ಕುಳಿತು  ಟಿವಿ ವೀಕ್ಷಿಸುತ್ತಿದ್ದ ವೇಳೆ ಟಿವಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು, ಟಿವಿ ಸ್ಪೋಟಗೊಂಡಿದೆ. ಈ ಅಪಘಾತದಲ್ಲಿ 3 ಮಕ್ಕಳು ಮೃತಪಟ್ಟಿದ್ದು ಮತ್ತು ತಕ್ಷಣ ಅಲ್ಲಿಂದ ಎದ್ದು ಓಡಿದ ಒಂದು ಮಗು ಮಾತ್ರ ಬದುಕುಳಿದಿದೆ.

ಫ್ರೆಶ್ ನ್ಯೂಸ್

Latest Posts

Featured Videos