ಈ ಬಾರಿ ಎಡಗೈ ತೋರು ಬೆರಳಿಗೆ ಶಾಯಿ, ಚುನಾವಣಾ ಆಯೋಗ ನಿರ್ಧಾರ

ಈ ಬಾರಿ ಎಡಗೈ ತೋರು ಬೆರಳಿಗೆ ಶಾಯಿ, ಚುನಾವಣಾ ಆಯೋಗ ನಿರ್ಧಾರ

ಬೆಂಗಳೂರು, ಏ. 10, ನ್ಯೂಸ್ ಎಕ್ಸ್ ಪ್ರೆಸ್: ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಎಡಗೈ ತೋರು ಬೆರಳಿಗೆ ಅಳಿಸಲಾಗದ ಇಂಕ್ ಹಾಕಲು ಚುನಾವಣಾ ಆಯೋಗ ನಿರ್ಧರಿಸಿದೆ.

ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವವರ ಎಡಗೈ ತೋರು ಬೆರಳಿಗೆ ಹಾಕುವ ಶಾಯಿಯನ್ನು ಚುನಾವಣಾ ಆಯೋಗ ಮೈಸೂರಿನ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯಿಂದ 6 ಲಕ್ಷ ಬಾಟಲು ಅಳಿಸಲಾಗದ ಶಾಯಿಯನ್ನು ಪಡೆದುಕೊಳ್ಳಲಾಗುತ್ತಿದೆ ಎನ್ನಲಾಗಿದೆ. 543 ಲೋಕಸಭಾ ಕ್ಷೇತ್ರಗಳಲ್ಲೂ ಕೂಡ ಈ ಶಾಹಿ ಬಳಕೆಯಾಗಲಿದೆ, ಅಳಿಸಲಾಗದ ಶಾಯಿಯನ್ನು ಒಂದು ಬಾರಿ ಮತದಾರರ ಬೆರಳಿಗೆ ಹಾಕಿದರೆ ಕನಿಷ್ಠ 3-4 ವಾರಗಳ ತನಕ ಆ ಶಾಯಿಯನ್ನು ಅಳಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos