ಇಂದು ಭಾರತ-ವೆಸ್ಟ್ ಇಂಡೀಸ್ ನಿರ್ಣಾಯಕ ಪಂದ್ಯ

ಇಂದು ಭಾರತ-ವೆಸ್ಟ್ ಇಂಡೀಸ್ ನಿರ್ಣಾಯಕ ಪಂದ್ಯ

ಕಟಕ್, ಡಿ. 22 : ಮೊದಲೆರಡೂ ಪಂದ್ಯಗಳಲ್ಲಿ ಪ್ರಚಂಡ ಪ್ರದರ್ಶನ ನೀಡಿ ಅಧಿಕಾರ ಯುತ ಗೆಲುವು ಸಾಧಿಸಿದ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ರವಿವಾರ ಕಟಕ್ನ “ಬಾರಾಬತಿ ಸ್ಟೇಡಿಯಂ’ನಲ್ಲಿ ಸರಣಿ ಗೆಲುವಿಗೆ ಶಕ್ತಿಮೀರಿ ಪ್ರಯತ್ನಿಸಲಿವೆ.
ಇತ್ತಂಡಗಳ ಟಿ20 ಸರಣಿಯಂತೆ ಏಕದಿನ ಸರಣಿ ಕೂಡ ಅಂತಿಮ ಪಂದ್ಯದಲ್ಲಿ “ಡಿಸೈಡರ್ ಗೇಮ್’ ಆಗಿ ಭಾರೀ ಮಹತ್ವ ಪಡೆದುಕೊಂಡಿದೆ. ಚುಟುಕು ಕ್ರಿಕೆಟ್ನಲ್ಲಿ ಮೊದಲ ಹಾಗೂ ಅಂತಿಮ ಪಂದ್ಯವನ್ನು ಗೆಲ್ಲುವ ಮೂಲಕ ಕೊಹ್ಲಿ ಪಡೆ ಸರಣಿ ಮೇಲೆ ಹಕ್ಕು ಚಲಾಯಿಸಿತ್ತು. ಇಲ್ಲಿ ವಿಂಡೀಸ್ ಮೊದಲ ಪಂದ್ಯ ಗೆದ್ದಿದೆ. ಬಳಿಕ ಭಾರತ ಸಮಬಲ ಸಾಧನೆಗೈದಿದೆ. ಕಟಕ್ನಲ್ಲಿ ಯಾರು ಯಾರನ್ನು ಕುಟುಕಬಹುದು ಎಂಬುದು ತೀವ್ರ ಕುತೂಹಲದ ಸಂಗತಿ.
2 ಪಂದ್ಯಗಳಲ್ಲಿ 4 ಶತಕ
ಚೆನ್ನೈಯಲ್ಲಿ ನಡೆದ ಮೊದಲ ಮೇಲಾಟದಲ್ಲಿ ಶಿಮ್ರನ್ ಹೆಟ್ಮೈರ್, ಶೈ ಹೋಪ್ ಶತಕ ಬಾರಿಸಿ ವಿಂಡೀಸಿಗೆ 8 ವಿಕೆಟ್ಗಳ ಅಮೋಘ ಜಯ ತಂದಿತ್ತಿದ್ದರು. ಭಾರತದ ಬೌಲಿಂಗ್ ಮತ್ತು ಫೀಲ್ಡಿಂಗ್ ತೀರಾ ಕಳಪೆಯಾಗಿದೆ ಎಂಬ ಕೂಗಿನ ನಡುವೆಯೇ ವಿಶಾಖಪಟ್ಟದಲ್ಲಿ ರೋಹಿತ್ ಶರ್ಮ, ಕೆ.ಎಲ್. ರಾಹುಲ್ ಶತಕ ಬಾರಿಸಿ ಅಬ್ಬರಿಸಿದರು. 107 ರನ್ನುಗಳ ಜಯಭೇರಿ ಮೊಳಗಿಸಿದ ಭಾರತ ಸರಣಿಯನ್ನು ಸಮಬಲಕ್ಕೆ ತಂದಿತು.
ಮೊದಲೆರಡೂ ಪಂದ್ಯಗಳಲ್ಲಿ ಬ್ಯಾಟ್ಸ್ಮನ್ಗಳೇ ಅಬ್ಬರಿಸಿ 4 ಶತಕ ಬಾರಿಸಿದ್ದನ್ನು ಕಂಡಾಗ ಕಟಕ್ ಕೂಡ “ಹೈ ಸ್ಕೋರ್ ಮ್ಯಾಚ್’ ಆದೀತೆಂಬ ನಿರೀಕ್ಷೆ ಇದೆ. ಆದರೆ “ಬಾರಾಬತಿ ಸ್ಟೇಡಿಯಂ’ನ ಇತಿಹಾಸ ಗಮನಿಸಿದಾಗ ಇದು ಬೌಲರ್ಗಳಿಗೆ ಸಹಕರಿಸಿದ ನಿದರ್ಶನವೇ ಅಧಿಕ. 2017ರ ಕೊನೆಯ ಪಂದ್ಯದಲ್ಲಿ ರನ್ ಮಳೆಯಾಗಿತ್ತು. ಆದರೆ ಇಲ್ಲಿ ಎರಡೂವರೆ ವರ್ಷಗಳ ಬಳಿಕ ಏಕದಿನ ಪಂದ್ಯ ನಡೆಯುತ್ತಿದ್ದು, ಪಿಚ್ ಹೇಗೆ ವರ್ತಿಸೀತೆಂದು ಅಂದಾಜಿಸುವುದು ಕಷ್ಟ.

ಫ್ರೆಶ್ ನ್ಯೂಸ್

Latest Posts

Featured Videos