ಬಿಗಿಯುಡುಗೆಯಿಂದಾಗಿ ವಾಷ್ ರೂಂಗೆ ಹೋಗಲಾಗದೆ ಒದ್ದಾಡಿದ ಕಿಮ್!

ಬಿಗಿಯುಡುಗೆಯಿಂದಾಗಿ ವಾಷ್ ರೂಂಗೆ ಹೋಗಲಾಗದೆ ಒದ್ದಾಡಿದ ಕಿಮ್!

ನ್ಯೂಯಾರ್ಕ್, ಮೇ.8, ನ್ಯೂಸ್ ಎಕ್ಸ್ ಪ್ರೆಸ್: ವರ್ಷದ ಅತ್ಯಂತ ದೊಡ್ಡ ಸಮಾರಂಭ ಮೆಟ್ ಗಾಲಾ ನ್ಯೂಯಾರ್ಕ್ ನಲ್ಲಿ ಮೇ 6 ರಂದು ನಡೆದಿದೆ. ಮೆಟ್ ಗಾಲಾದ ಸಂಜೆ ಸೆಲೆಬ್ರಿಟಿಗಳ ಚಿತ್ರವಿಚಿತ್ರ ಅವತಾರಗಳು ಎಲ್ಲರ ಗಮನ ಸೆಳೆದವು. ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಸೇರಿದಂತೆ ಬಾಲಿವುಡ್ ಸ್ಟಾರ್ ಜೊತೆ ಹಾಲಿವುಡ್ ಕಲಾವಿದರು ಇದ್ರಲ್ಲಿ ಪಾಲ್ಗೊಂಡಿದ್ದರು. ಮೆಟ್ ಗಾಲಾದಲ್ಲಿ ಹಾಲಿವುಡ್ ರಿಯಾಲಿಟಿ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್ ಎಲ್ಲರ ಗಮನ ಸೆಳೆದ್ಲು. ಕಿಮ್ ಡ್ರೆಸ್, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ. ಆಕೆ ಬೋಲ್ಡ್ ವ್ಯಕ್ತಿತ್ವಕ್ಕೆ ಈ ಡ್ರೆಸ್ ಹೊಂದಿಕೆಯಾಗ್ತಿತ್ತು. ಆದ್ರೆ ಈ ಡ್ರೆಸ್ ಧರಿಸುವುದು ಸುಲಭವಾಗಿರಲಿಲ್ಲ. ಸರಿಯಾಗಿ ಫಿಗರ್ ತೋರಿಸಲು ವಾಟರ್ ಪ್ರಿಂಟಿಂಗ್ ಡ್ರೆಸ್ ಧರಿಸಿದ್ದಳು ಕಿಮ್. ಈ ಡ್ರೆಸ್ ಕಿಮ್ ಗೆ ಕಿರಿಕಿರಿಯುಂಟು ಮಾಡಿದ್ದು ನಿಜ. ಡ್ರೆಸ್ ಧರಿಸಿದ ಮೇಲೆ ಕಿಮ್ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ. ತುಂಬಾ ಬಿಗಿಯಾಗಿದ್ದ ಬಟ್ಟೆ ಧರಿಸಿದ್ದ ಕಿಮ್, ನಡೆದಾಡ್ತಿದ್ದಳು, ಮಾತನಾಡುತ್ತಿದ್ದಳು. ಆದ್ರೆ ಕುಳಿತುಕೊಳ್ಳಲು ಆಗ್ತಿರಲಿಲ್ಲ. ಇದೇ ಕಾರಣಕ್ಕೆ ನಾಲ್ಕು ಗಂಟೆಗಳ ಕಾಲ ವಾಶ್ ರೂಮ್ ಗೆ ಆಕೆ ಹೋಗಿರಲಿಲ್ಲ. ಈ ಬಗ್ಗೆ ಕಿಮ್ ಹೇಳಿಕೆ ಕೂಡ ನೀಡಿದ್ದಾಳೆ. ನಾಲ್ಕು ಗಂಟೆಯವರೆಗೆ ನಾನು ವಾಶ್ ರೂಮಿಗೂ ಹೋಗುವಂತಿಲ್ಲ. ನನಗೆ ಬೆಸ್ಟ್ ಆಪ್ ಲಕ್ ಹೇಳಿ ಎಂದಿದ್ದಳು.

ಫ್ರೆಶ್ ನ್ಯೂಸ್

Latest Posts

Featured Videos