ಆಸ್ಟ್ರೇಲಿಯಾದಲ್ಲಿ ದೊರಕಿತು ತ್ರಿನೇತ್ರಗಳನ್ನು ಹೊಂದಿರುವ ಸರ್ಪ!

ಆಸ್ಟ್ರೇಲಿಯಾದಲ್ಲಿ ದೊರಕಿತು ತ್ರಿನೇತ್ರಗಳನ್ನು ಹೊಂದಿರುವ ಸರ್ಪ!

ಸಿಡ್ನಿ, ಮೇ.2, ನ್ಯೂಸ್ ಎಕ್ಸ್ ಪ್ರೆಸ್:  ಆಸ್ಟ್ರೇಲಿಯಾದ ಉತ್ತರ ಪ್ರಾಂತ್ಯದ ಹೆದ್ದಾರಿಯಲ್ಲಿ ಇತ್ತೀಚೆಗೆ ಮೂರು ಕಣ್ಣಿನ ಹಾವೊಂದು ಪತ್ತೆಯಾಗಿತ್ತು. ಈ ಹಾವಿನ ಪೋಟೊ ಹಾಗೂ  ವಿಡಿಯೋವನ್ನು ಆಸ್ಟ್ರೇಲಿಯಾ ವೈಲ್ಡ್​ಲೈಫ್ ಇದೀಗ ಫೇಸ್​ಬುಕ್​ನಲ್ಲಿ ಶೇರ್ ಮಾಡಿದ್ದು ಎಲ್ಲೆಡೆ ವೈರಲ್ ಆಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಆಸ್ಟ್ರೇಲಿಯಾದ ಉತ್ತರ ಪ್ರಾಂತೀಯ ಹೆದ್ದಾರಿಯಲ್ಲಿ ಫೈಥಾನ್ ಜಾತಿಗೆ ಸೇರಿದ ಮೂರು ತಿಂಗಳ ಹಾವೊಂದು ಪತ್ತೆಯಾಗಿತ್ತು. ಈ ಹಾವು ಹುಟ್ಟುವಾಗಲೇ ಮೂರು ಕಣ್ಣಿನೊಂದಿಗೆ ವಿಶಿಷ್ಟವಾಗಿ ಜನಿಸಿತ್ತು. ಆದರೆ ಇದು ಪತ್ತೆಯಾದ ಕೆಲವೇ ದಿನಗಳಲ್ಲಿ ಮೃತಪಟ್ಟಿದೆ ಎಂದು ಬಿಬಿಸಿ ವರದಿ ಮಾಡಿದೆ. ವೈಲ್ಡ್​ಲೈಫ್ ಅಧಿಕಾರಿಗಳು ನೀಡುವ ಮಾಹಿತಿಯಂತೆ ಆ ಹಾವಿನ ಮೂರನೇ ಕಣ್ಣು ಸಹ ಕೆಲಸ ನಿರ್ವಹಿಸುತ್ತಿತ್ತು. ಆದರೆ ಈ ಕಣ್ಣೆ ಅದರ ಮೃತ್ಯುವಿಗೂ ಕಾರಣವಾಗಿತ್ತು. ಕಾರಣ ಮೂರನೇ ಕಣ್ಣಿನಿಂದಾಗಿ ಇದರ ತಲೆಯ ಆಕೃತಿ ವಿಶಿಷ್ಟವಾಗಿ ರೂಪಗೊಂಡಿತ್ತು. ಪರಿಣಾಮ ಆಹಾರ ಸೇವಿಸುವುದು ಹಾವಿಗೆ ದುಸ್ಸಾದ್ಯವಾಗಿತ್ತು. ಕೊನೆಗೂ ಇದೇ ಕಾರಣಕ್ಕೆ ಹಾವು ಮೃತಪಟ್ಟಿದೆ ಎಂದು ಆಸ್ಟ್ರೇಲಿಯಾ ವೈಲ್ಡ್​ಲೈಪ್ ಅಧಿಕಾರಿಗಳು ತಿಳಿಸಿದ್ದಾರೆ.  ಈ ವಿಶಿಷ್ಟ ಹಾವಿನ ಚಿತ್ರವನ್ನು ಫೇಸ್​ಬುಕ್​ನಲ್ಲಿ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನ ವೀಕ್ಷಿಸಿದ್ದರೆ 13 ಸಾವಿರ ಜನ ಈ ಪೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ 8 ಸಾವಿರ ಜನ ಕಮೆಂಟ್ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos