ಮೂರು ದಿನ ಬ್ಯಾಂಕ್ ಬಂದ್..!

ಮೂರು ದಿನ ಬ್ಯಾಂಕ್ ಬಂದ್..!

ಬೆಂಗಳೂರು, ಜ. 31: ಇಂದು, ನಾಳೆ ಹಾಗೂ ನಾಡಿದ್ದು ಒಟ್ಟು 3 ದಿನಗಳ ಕಾಲ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವೇತನ ಒಪ್ಪಂದ ಮಾತುಕತೆ ವಿಫಲವಾದ ಹಿನ್ನೆಲೆ ದೇಶಾದ್ಯಂತ ಮುಷ್ಕರಕ್ಕೆ ಆಲ್ ಇಂಡಿಯಾ ಬ್ಯಾಂಕ್ ಅಸೋಸಿಯೇಷನ್ ಕರೆ ನೀಡಿದೆ. ಹೀಗಾಗಿ ಬೆಂಗಳೂರಿನಲ್ಲಿ ಬ್ಯಾಂಕ್ ಸೇವೆ ಸ್ಥಗಿತಗೊಳಿಸಿ ನೌಕರರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

2017ಕ್ಕೆ ಹಳೇ ವೇತನ ಒಪ್ಪಂದ ಮುಗಿದಿದೆ. ಹೀಗಾಗಿ 2 ವರ್ಷಗಳಿಂದ ವೇತನ ಒಪ್ಪಂದದ ಮಾತುಕತೆ ಫಲ ಕೊಡದ ಹಿನ್ನೆಲೆ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ. 2 ಬಾರಿ ಮುಷ್ಕರ ನಡೆಸಲು ಬ್ಯಾಂಕ್ ಅಸೋಸಿಯೇಷನ್ ತಿರ್ಮಾನ ಮಾಡಿದೆ. ಮೊದಲ ಬಾರಿ ಸರ್ಕಾರ ವೇತನ ಹೆಚ್ಚಳಕ್ಕೆ ಒಪ್ಪದಿದ್ದರೆ ಮಾರ್ಚ್ 11,12,13ರಂದು ಮತ್ತೆ ಬಂದ್ಗೆ ಕರೆ ನೀಡಲಾಗುತ್ತದೆ. ಒಂದು ವೇಳೆ ವೇತನ ಒಪ್ಪಂದ ಸರಿಹೋಗದೇ ಇದ್ದರೆ ಏಪ್ರಿಲ್ 1ರಿಂದ ಅನಿರ್ದಿಷ್ಟಾವದಿ ಮುಷ್ಕರಕ್ಕೆ ಕರೆ ನೀಡಿದೆ.

 

ಫ್ರೆಶ್ ನ್ಯೂಸ್

Latest Posts

Featured Videos