ಚಿತ್ರದುರ್ಗದಲ್ಲಿ ಕಳ್ಳರ ಕೈಚಳಕ!

ಚಿತ್ರದುರ್ಗದಲ್ಲಿ ಕಳ್ಳರ ಕೈಚಳಕ!

ಚಿತ್ರದುರ್ಗ, ಸೆ. 30: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪ್ರಸಿದ್ದ ಐತಿಹಾಸಿಕ ದೇವಾಲಯದ ನಾಯಕನಹಟ್ಟಿ ಶ್ರೀ‌ ಗುರುತಿಪ್ಪೇರುದ್ರಸ್ವಾಮಿ ಹೊರಮಠದ 2 ಹುಂಡಿಯ ಕಳ್ಳತನಕ್ಕೆ ಕಳ್ಳರು ಯತ್ನಿಸಿದ್ದು, ಲಕ್ಷಾಂತರ ಹಣ ಕದ್ದೊಯಿದು  ಹುಂಡಿಯನ್ನು ದೇವಸ್ಥಾನದ ಆವರಣದಲ್ಲಿ ಬಿಟ್ಟು ಪರರಿಯಾಗಿರುವ ಘಟನೆ ತಡರಾತ್ರಿ ನಡೆದಿದ್ದು, ಆರ್ಚಕರು ದೇವಸ್ಥಾನ ಪೂಜೆಗೆ ತೆರೆಳಿದಾಗ ವಿಷಯ ತಿಳಿದಿದೆ.

ಕಳ್ಳರು ದೇವಸ್ಥಾನದ ಗರ್ಭಗುಡಿಗೆ ಕಳ್ಳತನಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದ್ದು, ಕಳ್ಳರಿಗೆ ದಿಕ್ಕು ತೋಚದೆ ಇದ್ದಾಗ ತಿಪ್ಪೇರುದ್ರನ ಹೊರಮಠದ ಹುಂಡಿಗೆ ಯತ್ನಿಸಿದ್ದಾರೆಂದು ತಿಳಿದು ಬಂದಿದೆ.

ಹೊರಮಠದ ಹುಂಡಿಯನ್ನು ಹೊತ್ತ ಕಳ್ಳರು ದೇವಸ್ಥಾನದ ಆವರಣದಲ್ಲಿ ಹುಂಡಿಯನ್ನು ತಂದು ಒಡೆಯಲು ಪ್ರಯತ್ನಿಸಿದ್ದಾರೆ. ಹುಂಡಿಯ ಸ್ವಲ್ಪ ಭಾಗ ಕಲ್ಲಿನಿಂದ ಜಜ್ಜಿದ್ದರಿಂದ ಹುಂಡಿಯಲ್ಲಿರುವ ಚಿಲ್ಲರೆ ಹಣ ಹೊರಬಂದಿರುವುದು ದೃಶ್ಯದಲ್ಲಿ ಕಂಡುಬರುತ್ತದೆ. ಆದರೆ, ಕಳ್ಳತನ ವಿಫಲವಾಗಿದ್ದು ಹುಂಡಿಯನ್ನು ದೇವಸ್ಥಾನದ ಆವರಣದಲ್ಲಿ ಬಿಟ್ಟು ಪರರಿಯಾಗಿದ್ದಾರೆ.

ದೇವಸ್ಥಾನದಲ್ಲಿ ಸಿಸಿ ಟಿವಿ ಇರುವುದರಿಂದ ಕಳ್ಳರ ಕೈಚಳಕದ ಚಲನವಲಯಗಳು ಸೇರಿಯಾಗಿರಬಹುದು ಎನ್ನಲಾಗಿದೆ. ದೇವಸ್ಥಾನಕ್ಕೆ ಮುಜಾರಾಯಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಸ್ಥಳಕ್ಕೆ ನಾಯಕನಹಟ್ಟಿ ಪೋಲಿಸರು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos