ಎಳ್ಳು ಸೇವನೆಯಿಂದ ಹಲವಾರು ಪ್ರಯೋಜನಗಳು

ಎಳ್ಳು ಸೇವನೆಯಿಂದ ಹಲವಾರು ಪ್ರಯೋಜನಗಳು

ಬೆಂಗಳೂರು, ಜ. 13: ಸಾಮಾನ್ಯವಾಗಿ ನಾವೆಲ್ಲರು ಎಳ‍್ಳಿನಿಂದ ಹಲವಾರು ರೀತಿಯ ತಿಂಡಿ ತಿನಿಸುಗಳನ್ನ ಮಾಡಿ ತಿನ್ನುವುದುಂಟು. ಹೌದು, ಎಳ‍್ಳನ್ನು ತಿಂದರೆ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಗಳಿವೆ ಎಂಬುವುದನ್ನ ನಾವಿಂದು ತಿಳಿಯೋಣ

ವೈಜ್ಞಾನಿಕವಾಗಿ ನೋಡಿದರೆ ಎಳ್ಳು ಸೇವನೆ ಮಾಡಿದರೆ ಶರೀರ ಬಿಸಿಯಾಗಿರುತ್ತದೆ. ಜೊತೆಗೆ ಇದರ ಎಣ್ಣೆಯಿಂದ ದೇಹಕ್ಕೆ ತೇವಾಂಶ ಸಿಗುತ್ತದೆ. ಚಳಿಗಾಲದಲ್ಲಿ ದೇಹದ ತಾಪಮಾನ ಇಳಿಯುತ್ತದೆ. ಈ ಸಮಯದಲ್ಲಿ ವಾತಾವರಣದೊಂದಿಗೆ ದೇಹದ ಸಮತೋಲನ ಕಾಯ್ದುಕೊಳ್ಳಲು ಎಳ್ಳು ತಿನ್ನುವುದು ಉತ್ತಮವಾಗಿದೆ.

ಎಳ್ಳಿನಲ್ಲಿ ಸತು, ಮೆಗ್ನೇಷಿಯಂ, ಕಬ್ಬಿನಾಂಶ, ಮ್ಯಾಂಗನೀಸ್, ಕ್ಯಾಲ್ಸಿಯಂ, ಫಾಸ್ಪರಸ್, ವಿಟಮಿನ್ ಬಿ 1 ಮೊದಲಾದ ಪೌಷ್ಟಿಕಾಂಶಗಳಿವೆ. ಆದುದರಿಂದ ಇದನ್ನು ಸೇವನೆ ಮಾಡುವುದು ಉತ್ತಮ.

ಮಲ ಬದ್ಧತೆ ಅಥವಾ ಇನ್ನಿತರ ಬಹಿರ್ದೆಶೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಎಳ್ಳಿನ ನೀರು ಉತ್ತಮ ಔಷಧ. ಇದರಲ್ಲಿರುವ ನಾರಿನಂಶ, ಜೀರ್ಣಕ್ರಿಯೆಗೆ ಸಹಕಾರಿ.

ಚರ್ಮದ ಕಾಂತಿಗೆ, ಚರ್ಮ ಸುಕ್ಕುಗಟ್ಟುವುದಕ್ಕೆ ಹಾಗೂ ತಲೆಗೂದಲಿನ ಸಮಸ್ಯೆಗೂ ಎಳ್ಳು ಸುಲಭ ಮನೆ ಔಷಧ.

ಹೊಟ್ಟೆ ಉರಿ, ಅಸಿಡಿಟಿ ಸಮಸ್ಯೆ ಇರುವವರು, ಎಳ್ಳಿನ ಜ್ಯೂಸ್ ಸೇವಿಸುವುದು ಆರೋಗ್ಯಕ್ಕೆ ಉತ್ತಮ.

 

ಫ್ರೆಶ್ ನ್ಯೂಸ್

Latest Posts

Featured Videos