ನೇಣಿಗೆ ಶರಣಾದ ಮಹಿಳೆ

ನೇಣಿಗೆ ಶರಣಾದ ಮಹಿಳೆ

ರಾಮನಗರ,ನ. 16 : ದೇವಾಲಯಕ್ಕೆ ಬಂದ ಉದ್ಯೋಗಿಯೊಬ್ಬರು ದೇವಸ್ಥಾನದ ಚಪ್ಪರಕ್ಕೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಲ್ಲನಕುಪ್ಪೆ ಗ್ರಾಮದ ಬೆಂಗಳೂರಿನ ವಿಧಾನಸೌಧದ ಸಹಕಾರಿ ಇಲಾಖೆಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಹೇಮಾವತಿ ಆತ್ಮಹತ್ಯೆಗೆ ಶರಣಾದ ಉದ್ಯೋಗಿ.
ಆತ್ಮಹತ್ಯೆಗೆ ಶರಣಾದ ಹೇಮಾವತಿ ಕಲ್ಲನಕಪ್ಪೆ ಗ್ರಾಮದ ಮಹಾದೇಶ್ವರ ದೇವಾಲಯದಲ್ಲಿ ಕಳೆದ ಎರಡು ವರ್ಷಗಳಿಂದ ಪೂಜೆ ಸಲ್ಲಿಸುತ್ತಿದ್ದರು. ಆದರೆ ಈ ಬಾರಿ ದೇವಾಲಯಕ್ಕೆ ಬಂದಾಗ ದೇವಾಲಯದ ಮುಂಭಾಗ ಹಾಕಿದ್ದ ಚಪ್ಪರಕ್ಕೆ ನೇಣು ಬಿಗಿದುಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos