ಅವಳಿ ನಗರಕ್ಕೂ ಬಂದ್ ಬಿಸಿ ತಟ್ಟಿದೆ

ಅವಳಿ ನಗರಕ್ಕೂ ಬಂದ್ ಬಿಸಿ ತಟ್ಟಿದೆ

ಹುಬ್ಬಳ್ಳಿ, ಜ. 31: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬ್ಯಾಂಕುಗಳ ಒಕ್ಕೂಟ 2 ದಿನಗಳ ಮುಷ್ಕರಕ್ಕೆ ದೇಶಾದ್ಯಂತ ಕರೆ ನೀಡಿದ್ದು, ಸಾರ್ವತ್ರಿಕ ರವಿವಾರ ರಜೆ ಸೇರಿ ಒಟ್ಟು 3 ದಿನಗಳವರೆಗೆ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಇದರಿಂದಾಗಿ ಸತತ ಮೂರು ದಿನಗಳವರೆಗೆ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಹುಬ್ಬಳ್ಳಿ-ಧಾರವಾಡಕ್ಕೂ ಬಂದ್ ಬಿಸಿ ತಟ್ಟಿದ್ದು,  ಬ್ಯಾಂಕ್ ಗ್ರಾಹಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬ್ಯಾಂಕಗಳ ಮುಂದೆ ಇಂದು ಮತ್ತು ನಾಳೆ ಬ್ಯಾಂಕ್ ನ ವ್ಯವಹಾರ ನಡೆಯುವುದಿಲ್ಲ ಎಂದು ನಾಮಫಲಕ  ಹಾಕಿ  ಬ್ಯಾಂಕಿನ ಸಿಬ್ಬಂದಿಗಳು ಮುಷ್ಕರಕ್ಕೆ ಕರೆ ನೀಡಿದ್ದಾರೆ.

ನೌಕರರ ಪಿಂಚಣಿ ಪರಿಷ್ಕರಣೆ, ಶೇ. 20 ರಷ್ಟು ವೇತನ ಹೆಚ್ಚಳ, ವಾರದಲ್ಲಿ 5  ದಿನ ಮಾತ್ರ ಕರ್ತವ್ಯ ನಿರ್ವಹಣೆ, ನೂತನ  ಪಿಂಚಣಿ ಯೋಜನೆ ರದ್ದು, ಮೂಲ ವೇತನದೊಂದಿಗೆ ವಿಶೇಷ ಭತ್ಯೆ ಸೇರಿಸುವುದು ಸೇರಿ ಒಟ್ಟು 12 ಬೇಡಿಕೆಗಳಿಗೆ ಆಗ್ರಹಿಸಿ  ಮುಷ್ಕರಕ್ಕೆ ಕರೆ ನೀಡಲಾಗಿದೆ. ಇಂದಿನಿಂದ ನಡೆಯುವ ಮುಷ್ಖರಕ್ಕೆ  ಬಹುತೇಕ ಎಲ್ಲ ರಾಷ್ಟ್ರೀಕೃತ ಬ್ಯಾಂಕಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಎಟಿಎಂ ಹಾಗೂ ಆನಲೈನ್ ಬ್ಯಾಂಕಿಂಗ್ ಸೇವೆ ಎಂದಿನಂತೆ ಇರುವುದರಿಂದ ಸಾರ್ವಜನಿಕರು ಈ ಸೌಲಭ್ಯಗಳ ಮೂಲಕ ಹಣದ ವ್ಯವಹಾರ ಮಾಡಬಹುದಾಗಿದೆ.

ಏ.1 ರಿಂದ ಅನಿರ್ದಿಷ್ಟಾವಧಿ  ಮುಷ್ಕರಕ್ಕೆ ಕರೆ ಎರಡು ದಿನಗಳ ಮುಷ್ಕರದ ಬಳಿಕವು ಬೇಡಿಕೆ ಈಡೇರದಿದ್ದರೆ  ಮಾ. 11 ಮತ್ತು 12 ರಂದು ಮತ್ತೆ  ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಬ್ಯಾಂಕ್ ಒಕ್ಕೂಟ  ತಿಳಿಸಿದೆ. ಆಗಲೂ  ಯಾವುದೇ ಪ್ರಯೋಜನವಾಗದಿದ್ದರೇ  ಏ 1 ರಿಂದ  ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ  ನೀಡುವುದಾಗಿ ಒಕ್ಕೂಟ ತಿಳಿಸಿದೆ. ಮುಂದಿನ ಮುಷ್ಕರದ ದಿನಾಂಕದವರೆಗೆ ವಿವಿಧ ರೀತಿಯಲ್ಲಿ ಪ್ರತಿಭಟಿಸಲಾಗುತ್ತದೆ. ಪ್ರಮುಖವಾಗಿ ಕಚೇರಿ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದು, ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುವುದು, ಮೇಣದ ಬತ್ತಿ ಹಿಡಿದು ಪ್ರತಿಭಟನೆಯಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಒಕ್ಕೂಟ ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos