ಕಸದ ರಾಶಿ ಮೂಗು ಮುಚ್ಚಿಕೊಂಡು ತಿರುಗಾಡುತ್ತಿರುವ ಸಾರ್ವಜನಿಕರು

ಕಸದ ರಾಶಿ ಮೂಗು ಮುಚ್ಚಿಕೊಂಡು ತಿರುಗಾಡುತ್ತಿರುವ ಸಾರ್ವಜನಿಕರು

ಹುಣಸಗಿ:ಪಟ್ಟಣದ ಹೊರಹೊಲಯದ ಸುರಪುರ ಹುಣಸಗಿ ಮುಖ್ಯ ರಸ್ತೆಗೆ ಹೊಂದಿಕೊAಡAತೆ ಕಸದ ರಾಶಿಯನ್ನು ಇದ್ದು ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಮನೆ ಮಾಡಿದೆ.

ಪಟ್ಟಣದ ಸುರಪುರ ರಸ್ತೆಯ ಮಾರ್ಗದಲ್ಲಿ ಎಡ ಮತ್ತು ಬಲ ಭಾಗದ ಎರಡು ಕಡೆಗೆ ದೇವಾಪೂರ – ಮನಗೂಳಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಸಾರ್ವಜನಿಕರು ತಿರುಗಾಡುವಂತಹ ರಸ್ತೆಯ ಪಕ್ಕದಲ್ಲಿ ಕಸವನ್ನು ಚಲ್ಲುತ್ತಿದ್ದು ಬೆಳಗಿನ ಜಾವ ಸಾಕಷ್ಟು ಜನರು ಇದೇ ಮಾರ್ಗದಲ್ಲಿ ಪಟ್ಟಣದ ಬಸವೇಶ್ವರ ವೃತ್ತದ ಮೂಲಕ ವಜ್ಜಲ್ ಗ್ರಾಮದ ವರೆಗೂ ವಾಯುವಿಹಾರಕ್ಕೆ ತೆರಳುತ್ತಾರೆ ಆದರೆ ಬೆಳಗಿನ ಜಾವ ವಾಯು ವಿಹಾರಕ್ಕೆ ತೆರಳಿ ಒಳ್ಳೆಯ ಸುಹಾಸನೆಯ ಸುಗಂಧದ ಗಾಳಿಯನ್ನು ಪಡೆಯಲು ಹೊಗುವಂತಹ ಪಟ್ಟಣದ ನಿವಾಸಿಗಳು ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಗಬ್ಬು ನಾರುತ್ತಿರುವ ವಾಸನೆಯನ್ನು ತೆಗೆದುಕೊಂಡು ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಬೀದಿ ತುಂಬೆಲ್ಲಾ ಸ್ವಚ್ಚತೆಯನ್ನು ಕಾಪಾಡುತ್ತಿರುವ ಅಧಿಕಾರಿಗಳಿಗೆ ಇಲ್ಲಿನ ಗಬ್ಬು ನಾರುತ್ತಿರುವ ಕಸದ ರಾಶಿ ಕಾಣುತ್ತಿಲ್ಲವೇನೋ ಎಂದು ಸಾರ್ವಜನಿಕರು ತಮ್ಮ ಆಕ್ರೋಶಕ್ಕೆ ವ್ಯಕ್ತಪಡಿಸುತ್ತಿದ್ದಾರೆ.

ಇದಕ್ಕೆ ಸಂಬಧಿಸಿದ ಅಧಿಕಾರಿಗಳು ತಕ್ಷಣವೇ ಕಸದ ರಾಶಿಯನ್ನು ಹಾಕಲು ಬೇರೆಡೆಗೆ ಸ್ಥಳಾವಕಾಶ ಮಾಡಿ ಸಾರ್ವಜನಿಕರು ತಿರುಗಾಡಲು ಅನುಕೂಲ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದ್ದು ಅಧಿಕಾರಿಗಳು ಕಸದ ರಾಶಿಯನ್ನು ಬೇರೆಡೆಗೆ ಸಾಗಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುವವರೇ ಎಂದು ಕಾದು ನೋಡಬೇಕಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos